-->

ಜೂನ್ 16-ಜುಲೈ 31ರವರೆಗೆ 30 ಲಕ್ಷಕ್ಕೂ ಅಧಿಕ ಭಾರತೀಯ ವಾಟ್ಸ್ಆ್ಯಪ್ ಖಾತೆಗಳಿಗೆ ನಿಷೇಧ

ಜೂನ್ 16-ಜುಲೈ 31ರವರೆಗೆ 30 ಲಕ್ಷಕ್ಕೂ ಅಧಿಕ ಭಾರತೀಯ ವಾಟ್ಸ್ಆ್ಯಪ್ ಖಾತೆಗಳಿಗೆ ನಿಷೇಧ

ಹೊಸದಿಲ್ಲಿ: ಅನುಚಿತ, ಹಾನಿಕಾರಕ ವರ್ತನೆ ಮತ್ತು ಸ್ಪ್ಯಾಮ್ ಗಳನ್ನು ತಡೆಯುವ ಉದ್ದೇಶದಿಂದ ವಾಟ್ಸ್ಆ್ಯಪ್ ಪ್ರಸಕ್ತ ವರ್ಷದ ಜೂನ್ 16ರಿಂದ ಜುಲೈ 31ರ ತನಕ ಸುಮಾರು 30 ಲಕ್ಷಕ್ಕೂ ಅಧಿಕ ಭಾರತೀಯ ಖಾತೆಗಳನ್ನು ನಿಷೇಧ ಮಾಡಿದೆ ಎಂದು ಮಂಗಳವಾರ ಬಿಡುಗಡೆಗೊಳಿಸಲಾದ ಕಂಪೆನಿಯ ಮಾಸಿಕ ಪಾರದರ್ಶಕತೆ ವರದಿಯಲ್ಲಿ ತಿಳಿಸಲಾಗಿದೆ. ಇದು ಭಾರತದ ಹೊಸ ಐಟಿ ನಿಯಮ 2021ರ ಅನುಸಾರ ವಾಟ್ಸ್ಆ್ಯಪ್ ಬಿಡುಗಡೆಗೊಳಿಸಿರುವ ಎರಡನೇ ವರದಿಯಾಗಿದೆ.

ಭಾರತೀಯ ಖಾತೆಯನ್ನು ಸಂಸ್ಥೆಯು +91 ಫೋನ್ ಸಂಖ್ಯೆಯ ಮೂಲಕ ಗುರುತಿಸುತ್ತದೆ. ನಿಷೇಧಗೊಂಡ ಭಾರತೀಯ ಖಾತೆಗಳ ಪೈಕಿ ಶೇ95ಕ್ಕೂ ಅಧಿಕ ಖಾತೆಗಳು ಅನಧಿಕೃತವಾಗಿ ಆಟೊಮೇಟೆಡ್ ಅಥವಾ ಬಲ್ಕ್ ಮೆಸೇಜಿಂಗ್ ಬಳಸಿವೆ. ಜಾಗತಿಕವಾಗಿ ಹೇಳುವುದಾದರೆ ಮಾಸಿಕ ಸುಮಾರು 80 ಲಕ್ಷ ಖಾತೆಗಳು ನಿಷೇಧಗೊಳಗಾಗುತ್ತವೆ. ಮೇಲೆ ತಿಳಿಸಿದ ಅವಧಿಯಲ್ಲಿ ನಿಷೇಧ ಮನವಿ, ಉತ್ಪನ್ನ ಬೆಂಬಲ, ಖಾತೆ ಬೆಂಬಲ, ಸುರಕ್ಷತಾ ಬೆಂಬಲಕ್ಕೆ ಸಂಬಂಧಿಸಿದಂತೆ 594 ದೂರುಗಳು ಬಳಕೆದಾರರಿಂದ ಬಂದಿವೆ ಎಂದು ಹೇಳಲಾಗಿದೆ.

ಇವುಗಳ ಪೈಕಿ 74 ಪ್ರಕರಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ 74 ಪ್ರಕರಣಗಳ ಪೈಕಿ 73 ಖಾತೆ ನಿಷೇಧಕ್ಕೆ ಸಂಬಂಧಿಸಿದ ಅಪೀಲುಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.   

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99