-->
ಮಂಗಳೂರಿನಲ್ಲಿ 21 ವರ್ಷದ ಪಂಜಾಬಿ ಮೂಲದ ಹೋಮ್ ನರ್ಸ್ ನಾಪತ್ತೆ

ಮಂಗಳೂರಿನಲ್ಲಿ 21 ವರ್ಷದ ಪಂಜಾಬಿ ಮೂಲದ ಹೋಮ್ ನರ್ಸ್ ನಾಪತ್ತೆ

ಮಂಗಳೂರು: ನಗರದಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಪಂಜಾಬಿ ಮೂಲದ ಯುವತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ  ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಂಜಾಬ್ ಮೂಲದ ಲಿಶ್ಬ (21) ನಾಪತ್ತೆಯಾದ ಯುವತಿ.‌ ಈಕೆ ‘ವಿ ಕೇರ್ ನರ್ಸಿಂಗ್ ಹೋಮ್ ಪಿಜಿ’ಯಲ್ಲಿ ಹೋಮ್ ನರ್ಸಿಂಗ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು ಅದೇ ಪಿಜಿಯಲ್ಲಿ ನೆಲೆಸಿದ್ದರು. ಆ.17ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಊರಿಗೆ ಹೋಗಿ ಬರುವುದಾಗಿ ಪಿಜಿ ಮಾಲಕರಿಗೆ ತಿಳಿಸಿದ ಯುವತಿ ನಾಪತ್ತೆಯಾಗಿದ್ದಾರೆ. ಮರುದಿನ (ಆ.18) ಬೆಳಗ್ಗೆ 9 ಗಂಟೆ ಸುಮಾರಿಗೆ ತಾಯಿ ಮಂಜಿತ್ ಅವರು ಲಿಶ್ಬ ಅವರಿಗೆ ಕರೆ ಮಾಡಿದ್ದರು. ಈ ಸಂದರ್ಭ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಬಳಿಕ ಅವರು ಪಿಜಿ ಮಾಲಕರು ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲಿಶ್ಬ ಅವರು 5.3 ಅಡಿ ಎತ್ತರವಿದ್ದು, ಪಿಜಿಯಿಂದ ತೆರಳುವ ಸಂದರ್ಭ ನೀಲಿ ಬಣ್ಣದ ಜೀನ್ಸ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದರು. ಹಿಂದಿ, ಪಂಜಾಬಿ ಮಾತನಾಡುತ್ತಾರೆ. ನಾಪತ್ತೆಯಾದ ಯುವತಿಯ ಬಗ್ಗೆ ತಿಳಿದುಬಂದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆ (0824- 2220518, 9480805339) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article