"ಕರ್ಷಕ ಶ್ರೀ ಹಾಲು" ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರುಕಟ್ಟೆಗೆ
Wednesday, September 1, 2021
ಮಂಗಳೂರು : ಕೇರಳದ ಪ್ರಸಿದ್ಧ 'ಕರ್ಷಕ ಶ್ರೀ ಹಾಲು' ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಗೆ ಇಂದು ಬಿಡುಗಡೆ ಗೊಂಡಿದೆ. ಶಾಸಕ ಯು.ಟಿ ಖಾದರ್ ಮಂಗಳೂರಿನಲ್ಲಿ ಕರ್ಷಕ ಶ್ರೀ ಹಾಲನ್ನು ಬಿಡುಗಡೆ ಗೊಳಿಸಿದರು.
ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ದ ಜನರಿಗೆ ಆರೋಗ್ಯದಾಯಕವಾದ ಗುಣಮಟ್ಟದ ಹಾಲು ನೀಡಲು ಕೇರಳದ ಸಂಸ್ಥೆ ಮುಂದೆ ಬಂದಿರುವುದು ಸಂತೋಷದ ವಿಷಯ. ಗುಣಮಟ್ಟದಲ್ಲಿ ಜನರ ವಿಶ್ವಾಸಗಳಿಸಿಕೊಂಡು ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಯು.ಟಿ ಖಾದರ್ ಹಾರೈಸಿದರು.
ಸಂಸ್ಥೆಯ ನಿರ್ದೇಶಕ ಇ ಅಬ್ದುಲ್ಲಾ ಅಬ್ದುಲ್ ಕುಂಞಮಾತನಾಡಿ ಕೃಷಿಕರಿಂದ ನೇರವಾಗಿ ಹಾಲು ಖರೀದಿಸಿ ಯಾವುದೇ ರಾಸಾಯನಿಕ ಬಳಸದೆ ಉತ್ತಮ ಗುಣಮಟ್ಟದ ಹಾಲನ್ನು ನಮ್ಮ ಸಂಸ್ಥೆ ನೀಡುತ್ತಿದೆ. ಕೇರಳ ಕರ್ನಾಟಕದ ಗಡಿ ಭಾಗದಲ್ಲಿ ಕರ್ಷಕ ಶ್ರೀ ಹಾಲಿಗೆ ಉತ್ತಮ ಬೇಡಿಕೆ ಇರುವುದರಿಂದ ನಾವು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ನಾವು ಹಾಲಿನಿಂದ ಬೆಣ್ಣೆಯನ್ನು ಅಥವಾ ಅದರ ಕೆನೆಯನ್ನು ಪ್ರತ್ಯೇಕಿಸುವುದಿಲ್ಲ, ಹಾಗಾಗಿ ಹಾಲು ತನ್ನ ಎಲ್ಲಾ ಸತ್ವಗಳನ್ನು ಉಳಿಸಿಕೊಂಡು ಗುಣಮಟ್ಟವನ್ನು ಉಳಿಸಿಕೊಂಡಿದೆ. ಕೇರಳದಲ್ಲಿ ಕಳೆದ ಆರು ವರ್ಷಗಳಿಂದ ಮನೆಮಾತಾಗಿದ್ದು ಉತ್ತಮ ಮಾರುಕಟ್ಟೆಯನ್ನು ಹೊಂದಿದೆ ಎಂದು ಅವರು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕರ್ಷಕ ಶ್ರೀ ಸಂಸ್ಥೆಯ ಮೆನೇಜರ್ ರವೀಂದ್ರನ್, ದಕ್ಷಿಣ ಕನ್ನಡ ಜಿಲ್ಲೆಯ ಇನ್ ಚಾರ್ಜ್ ಚಂದ್ರಶೇಖರ್, ಗ್ಯಾಲಕ್ಸಿ ಡಿಸ್ಟ್ರಿಬ್ಯುಟರ್ ನ ಮಾರ್ಕೆಟಿಂಗ್ ಮುಖ್ಯಸ್ಥ ಸುಜಿತ್, ಸ್ಟೀವನ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.