ನ್ಯೂಸ್ ಪ್ರಿಂಟ್ ಸಂಸ್ಥೆಯಲ್ಲಿ ಇದೆ ಹಲವು ಉದ್ಯೋಗಾವಕಾಶ- 12 ರಿಂದ 20 ಸಾವಿರ ಸ್ಯಾಲರಿ!
Tuesday, September 7, 2021
ಎನ್ಇಪಿಎ ಖಾಸಗಿ ಸಂಸ್ಥೆಯಾಗಿ 1947ರಲ್ಲಿ ಪ್ರಾರಂಭವಾಯಿತು. ನಂತರ ಮಧ್ಯಪ್ರದೇಶ ಸರ್ಕಾರ 1949ರಲ್ಲಿ ಇದನ್ನು ತನ್ನ ಅಧೀನಕ್ಕೆ ಪಡೆಯಿತು. 1959ರಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಯಾಗಿ ಮಾರ್ಪಟ್ಟಿತು. ಇದು ದೇಶದ ಮೊದಲ ಮುದ್ರಣ ಕಾಗದ ಉತ್ಪಾದನಾ ಘಟಕ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳಿಗೆ ಶೋಧ ನಡೆಸಲಾಗುತ್ತಿದೆ.ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಮಾಡಲಾಗುವುದು.
ವಿದ್ಯಾರ್ಹತೆ: ಸಿವಿಲ್ ಇಂಜಿನಿಯರ್- 3, ಡಿಸಿಎಸ್/ಕ್ಯುಸಿಎಸ್ ಆಪರೇಟರ್- 6, ಪೇಪರ್ ಮಷಿನ್ ಆಪರೇಟರ್- 15, ಐಟಿಐ (ಫಿಟ್ಟರ್- 6, ಎಲೆಕ್ಟ್ರಿಷಿಯನ್-10, ಇನ್ಸ್ಟ್ರುಮೆಂಟ್-8) – 24 ಹುದ್ದೆಗಳಿವೆ. ಐಟಿಐ, ಡಿಪ್ಲೊಮಾ, ಬಿಇ, ಬಿ.ಟೆಕ್ (ಐಟಿ, ಸಿವಿಲ್)/ ಎಂಸಿಎ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ ವೃತ್ತಿ ಅನುಭವ ಕೇಳಲಾಗಿದೆ. ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30-50 ವರ್ಷ ವಯೋಮಿತಿ ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 12,000-20,000 ರೂ. ಇದೆ. ವೃತ್ತಿ ಅನುಭವ ಆಧಾರದ ಮೇಲೆ ವೇತನ ಚರ್ಚೆಗೆ ಅವಕಾಶ ಇದೆ.
ಅರ್ಜಿಸಲ್ಲಿಕೆ ವಿಳಾಸ: Manager (P&A) Nepa Limited, Nepanagar, Dist – Burhanpur Madhya Pradesh – 450 221
ಅಧಿಸೂಚನೆಗೆ: https://bit.ly/3jinsID
ಮಾಹಿತಿಗೆ: http://www.nepamills.co.in/