ಗೆಳೆಯನ ಮೀನು ತಿನ್ನುವ ಆಸೆ ತೀರಿಸಲು ಹೋಗಿ ತಾನೇ ಪ್ರಾಣ ಕಳೆದುಕೊಂಡ...!!
Tuesday, September 7, 2021
ಚಿಕ್ಕಬಳ್ಳಾಪುರ: ಗೆಳೆಯನ ಆಸೆಯನ್ನು ತೀರಿಸಲು ಹೋದಾತ ದುರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಕಂದವಾರ ನಿವಾಸಿಗಳಾದ ಬಾಬು ಹಾಗೂ ಶಾಂತಾರಾಮ್ ಎಂಬ ಗೆಳೆಯರ ಪೈಕಿ ಶಾಂತಾರಾಮ್ ಪ್ರಾಣ ಕಳೆದುಕೊಂಡಿದ್ದಾನೆ. ಮದ್ಯಪಾನ ಮಾಡಿದ್ದ ಇಬ್ಬರೂ ಕಂದವಾರ ಕೆರೆ ಏರಿ ಬಳಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ಗೆಳೆಯ ಮೀನು ತಿನ್ನುವ ಆಸೆ ವ್ಯಕ್ತಪಡಿಸಿದ್ದಾನೆ. ಅದಕ್ಕೇನು, ಹೋಗಿ ತರುತ್ತೇನೆ ಎಂದು ಅಮಲಿನಲ್ಲಿ ನೀರಿಗಳಿದ ಶಾಂತಾರಾಮ್ ನೀರಲ್ಲಿ ಮುಳುಗಿ ಹೋಗಿದ್ದಾನೆ. ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಬಾಬು, ರಕ್ಷಣೆಗಾಗಿ ಕೂಗಿ ಕೊಂಡಿದ್ದಾನೆ. ಆಗ ಹತ್ತಿರದಲ್ಲಿದ್ದ ಮೀನುಗಾರರು ಧಾವಿಸಿ ರಕ್ಷಣೆ ಮಾಡುವಷ್ಟರಲ್ಲಿ ಶಾಂತಾರಾಮ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಳಿಕ ಸ್ಥಳೀಯರು ನೀರಿನಿಂದ ಶವ ಹೊರತೆಗೆದಿದ್ದಾರೆ.