ಹುಣಸೂರು: ಐದು ರೂಪಾಯಿ ನಾಣ್ಯ ನುಂಗಿ ಮಗು ಸಾವು..
Monday, September 6, 2021
ಮೈಸೂರು: ಐದು ರೂಪಾಯಿ ನಾಣ್ಯವನ್ನು ನುಂಗಿ ನಾಲ್ಕು ವರ್ಷದ ಹೆಣ್ಣು ಮಗವೊಂದು ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಖುಷಿ ಮೃತ ದುರ್ದೈವಿ. ಮಗು ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿತ್ತು. ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ಮಗು ನುಂಗಿದೆ. ತಕ್ಷಣ ಮಗುವನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ವೇಳೆ ಮಗು ಮೃತಪಟ್ಟಿದೆ. ಮಗುವಿನ ಸಾವಿನ ಸುದ್ದಿ ಕೇಳಿದ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.