ಗಗನ ಸಖಿ ಕೆಲಸದ ಸಂದರ್ಶನಕ್ಕೆ ಹೋಗುತ್ತಿದ್ದ ಯುವತಿ ಅಪಘಾತಕ್ಕೆ ಬಲಿ..
Monday, September 6, 2021
ಬೆಂಗಳೂರು: ಗಗನ ಸಖಿ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿದ್ದ ಯುವತಿಯ ಸ್ಕೂಟರ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದು ತಲೆಯ ಮೇಲೇ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕುರುಬರಪಾಳ್ಯದ ನಿವಾಸಿ ಗಂಗಾ (22) ಮೃತಪಟ್ಟ ಯುವತಿ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ.3ರಂದು ಗಗನಸಖಿ ಕೆಲಸಕ್ಕೆ ಕರೆದಿದ್ದ ಸಂರ್ದಶನಕ್ಕಾಗಿ ಕುರುಬರ ಪಾಳ್ಯದಿಂದ ಸ್ಕೂಟರ್‌ನಲ್ಲಿ ಏರ್‌ಪೋರ್ಟ್‌ನತ್ತ ಹೋಗುತ್ತಿದ್ದಳು. ಮಾರ್ಗಮಧ್ಯೆ ಭದ್ರಪ್ಪ ಲೇಔಟ್ ಮೆಲ್ಸೇತುವೆ ಬಳಿ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಗಂಗಾ ತಲೆ, ಕೈ-ಕಾಲುಗಳ ಮೇಲೆ ಕ್ಯಾಂಟರ್ ಹರಿದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು.
ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಂಗಾಳ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಿ ಲಾರಿ ಚಾಲಕ ನಾಗರಾಜ್‌ನ್ನು ಬಂಧಿಸಿದ್ದಾರೆ.