
ನಾಟಿಕೋಳಿಗೂ ಟಿಕೆಟ್ ನೀಡಿದ ಕೆಎಸ್ಆರ್ ಟಿಸಿ ನಿರ್ವಾಹಕ: ಪೆಚ್ಚಾದ ಪ್ರಯಾಣಿಕ
Wednesday, September 1, 2021
ಚಿಕ್ಕಬಳ್ಳಾಪುರ: ನಾಟಿ ಕೋಳಿಯೊಂದಿಗೆ ಕೆಎಸ್ಆರ್ಟಿಸಿ ಬಸ್ ಹತ್ತಿದ ಪ್ರಯಾಣಿಕನಿಗೆ ಆತನ ಸಹಿತ ನಾಟಿಕೋಳಿಗೂ ನಿರ್ವಾಹಕ ಟಿಕೆಟ್ ನೀಡಿದ್ದು, ಇದೀಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ರಾಜ್ಯದ ಚಿಕ್ಕಬಳ್ಳಾಪುರ ತಾಲೂಕಿನ ಸೋಮೇಶ್ವರದ ವ್ಯಕ್ತಿಯೊಬ್ಬ ಶ್ರಾವಣ ಮಾಸದ ಪ್ರಯುಕ್ತ ಪೆರೇಸಂದ್ರದಲ್ಲಿ ನಾಟಿ ಕೋಳಿಯೊಂದನ್ನು ಖರೀದಿಸಿ ಕೆಎಸ್ಆರ್ಟಿಸಿ ಬಸ್ ಹತ್ತಿದ್ದ. ಸೋಮೇಶ್ವರಕ್ಕೆ ಒಂದು ಟಿಕೆಟ್ ಎಂದು ಪ್ರಯಾಣಿಕ ಕೇಳಿದ್ರೆ, ನಿರ್ವಾಹಕ ನೀಡಿದ್ದು ಒಂದೂವರೆ ಟಿಕೆಟ್. ಪೆಚ್ಚಾದ ಪ್ರಯಾಣಿಕ ಒಂದುವರೆ ಟಿಕೆಟ್ ನೀಡಿದ್ದಾನೆ.
ಪ್ರಯಾಣಿಕನಿಗೆ ಒಂದು ಟಿಕೆಟ್(10 ರೂ.), ಅವನ ಜತೆಗಿದ್ದ ನಾಟಿಕೋಳಿಗೂ ಅರ್ಧ ಟಿಕೆಟ್(5 ರೂ.) ಕೊಟ್ಟಿದ್ದಾರೆ. ಈ ವಿಚಾರ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಕೋಳಿಗೂ ಟಿಕೆಟ್ ಕೊಟ್ಟಿದ್ದಕ್ಕೆ ಪ್ರಯಾಣಿಕ ತನ್ನ ಪಕ್ಕದ ಸೀಟ್ನಲ್ಲೇ ಕೋಳಿಯನ್ನೂ ಕೂರಿಸಿಕೊಂಡು ಪ್ರಯಾಣಿಸಿದ್ದಾನೆ. ಈ ಫೋಟೋ ವೈರಲ್ ಆಗಿದೆ.