ನಾಲ್ಕು ವರ್ಷದ ಮಗುವಿಗೆ ಸಿಹಿತಿಂಡಿ ಆಮಿಷವೊಡ್ಡಿ ಅತ್ಯಾಚಾರ!
Wednesday, September 1, 2021
ನವದೆಹಲಿ: ಕಾಮುಕನೋರ್ವ ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಆರೋಪಿಗೆ ಸರಿಯಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ದೆಹಲಿಯ ಬಾಪಾ ನಗರ ಪ್ರದೇಶದಲ್ಲಿ ಕಳೆದ ವಾರ ಮಗುವೊಂದು ಮನೆಯ ಹತ್ತಿರ ಆಡುತ್ತಿತ್ತು. ಈ ಸಂದರ್ಭ ಹತ್ತಿರದ ಜೀನ್ಸ್ ಉತ್ಪಾದಿಸುವ ಕಾರ್ಖಾನೆಯ 25 ವರ್ಷ ವಯಸ್ಸಿನ ಕಾರ್ಮಿಕ ಮಗುವಿಗೆ ಸಿಹಿತಿಂಡಿ ಆಮಿಷವೊಡ್ಡಿ ಒಳ ಕರೆದೊಯ್ದು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಈ ವಿಚಾರವನ್ನು ಮಗು ಹೆತ್ತವರಲ್ಲಿ ತಿಳಿಸಿದೆ. ತಕ್ಷಣ ಮಗುವಿನ ಹೆತ್ತವರು ಮತ್ತು ಸ್ಥಳೀಯರು ಜೀನ್ಸ್ ಫ್ಯಾಕ್ಟರಿಗೆ ತೆರಳಿ ಆರೋಪಿಯನ್ನು ಚೆನ್ನಾಗಿ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೊಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.