ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕೃತಿ ಸನೋನ್
Sunday, September 12, 2021
ಮುಂಬೈ : ಬಾಲಿವುಡ್ ನಟಿ ಕೃತಿ ಸನೋನ್ ಇದೀಗ 2.43 ಕೋಟಿ ರೂ. ಮೌಲ್ಯದ ‘ಮರ್ಸಿಡಿಸ್ ಮೇಬ್ಯಾಕ್ ಜಿಎಲ್ಎ 600’ ಐಷಾರಾಮಿ ಕಾರು ಖರೀದಿಸಿದ್ದಾರೆ.
‘ಮಿಮಿ’ ಚಿತ್ರದ ಯಶಸ್ಸಿನಿಂದ ಕೃತಿಗೆ ತುಂಬ ಖುಷಿ ಆಯಿತು. ಹಾಗಾಗಿ ಏನಾದರೂ ಅಮೂಲ್ಯವಾದದ್ದನ್ನು ಖರೀದಿಸಲು ಅವರು ನಿರ್ಧರಿಸಿದರು. ಈ ಕಾರು ಕೊಂಡುಕೊಳ್ಳಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು. ಅದೀಗ ನನಸಾಗಿದೆ’ ಎಂದು ಅವರ ಆಪ್ತರು ಹೇಳಿದ್ದಾರೆ.