'ನನ್ನ ಸಾವಿಗೆ ಸುಬ್ಬನೇ ಕಾರಣ’ ಡೆತ್ನೋಟ್ ಬರೆದಿಟ್ಟು ಬಾಲಕಿ ಸಾವು...!!
Sunday, September 12, 2021
ಬೆಂಗಳೂರು: ‘ನನ್ನ ಸಾವಿಗೆ ಸುಬ್ಬನೇ ಕಾರಣ’ ಎಂದು ಡೆತ್ನೋಟ್ ಬರೆದಿಟ್ಟು ಮೂರು ದಿನಗಳ ಹಿಂದೆ ವಿಷ ಕುಡಿದಿದ್ದ ಬಾಲಕಿ ಇಂದು ಸಾವಿಗೀಡಾಗಿದ್ದಾಳೆ.ನನ್ನ ಸಾವಿಗೆ ಸುಬ್ಬನೇ ಕಾರಣ ಎಂದು ಸುಬ್ರಹಣ್ಯ ಎಂಬಾತನ ಕುರಿತು ಬಾಲಕಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ. ಈ ಘಟನೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.
ಸಾವಿಗೀಡಾದ ಬಾಲಕಿ ಕೆಲವು ದಿನಗಳ ಹಿಂದೆ ಶೌಚಾಲಯಕ್ಕೆ ಹೋಗಿ ಬರುತ್ತಿದ್ದಾಗ ಅದೇ ಗ್ರಾಮದ ಸುಬ್ರಹ್ಮಣ್ಯ ಎಂಬಾತ ಮುಸುಕು ಹಾಕಿಕೊಂಡು ಬಂದು ಆಕೆಯನ್ನು ಹಿಡಿದು ಎಳೆದಾಡಿದ್ದ. ಅವಳು ಅಮ್ಮ ಎಂದು ಕಿರುಚಿಕೊಂಡಿದ್ದಾಗ ಓಡಿ ಹೋಗಿದ್ದ. ಓಡುವಾಗ ಆತನ ಮೊಬೈಲ್ಫೋನ್ ಬಿದ್ದು ಹೋಗಿತ್ತು.ಹೀಗಾದ ಬಳಿಕ ಆತ ಬಾಲಕಿಯ ಕುರಿತು ಕೆಟ್ಟದಾಗಿ ಹೇಳಿಕೊಂಡು ತಿರುಗಾಡಿದ್ದ. ಆ ವಿಷಯ ಆಕೆಯ ತಂದೆ-ತಾಯಿವರೆಗೂ ತಲುಪಿದ್ದು, ಮನೆಯವರು ಕೇಳಿದಾಗ ಬಾಲಕಿ ಅವಮಾನಕ್ಕೀಡಾಗಿದ್ದಾಳೆ. ಆತನಿಂದ ತಂದೆ-ತಾಯಿ ಬಳಿಯೂ ಅವಮಾನಕ್ಕೀಡಾಗುವಂತೆ ಆಯಿತೆಂದು ವಿಷ ಕುಡಿದಿದ್ದಳು.ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಈ ಬಗ್ಗೆ ಬಾಲಕಿಯ ಪೋಷಕರು ನಂದಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.