ಸಮುದ್ರದ ಮಧ್ಯೆ ಬೃಹತ್ ಗಾತ್ರದ ಹಾವು ಪ್ರತ್ಯಕ್ಷ! ಬೋಟ್ ನಲ್ಲಿದ್ದಾತ ಮಾಡಿದ್ದೇನು ಗೊತ್ತಾ..? (Video)
Tuesday, September 7, 2021
ಆಸಿಸ್: ಹಾವುಗಳನ್ನು ಕಂಡರೆ ಸಹಜವಾಗಿ ಯಾರಾದರೂ ಭಯ ಬೀಳುವುದು ಸಹಜ. ಆದರೆ ಕೆಲವರು ಹಾವಿನ ಭೀತಿಯಿಲ್ಲದೆ ಅದರ ಜೊತೆಗೆ ಸರಸವಾಡುವವರೂ ಇದ್ದಾರೆ. ಈಗ ಅಂತಹದ್ದೇ ಒಬ್ಬ ವ್ಯಕ್ತಿಯ ವೀಡಿಯೋ ಈಗ ವೈರಲ್ ಆಗಿದೆ.
ಆಸ್ಟ್ರೇಲಿಯಾದ ಯೂಟ್ಯೂಬರ್ ಹಂಚಿಕೊಂಡ ಈ ವೀಡಿಯೋದಲ್ಲಿ ದೊಡ್ಡಗಾತ್ರದ ಹಾವೊಂದು ಸಮುದ್ರದ ನಡುವೆ ದಿಢೀರ್ ಪ್ರತ್ಯಕ್ಷವಾಗುತ್ತದೆ. ನೋಡ ನೋಡುತ್ತಿದ್ದಂತೆ ಆ ಬೋಟ್ ಬಳಿಯೇ ಬಂದುಬಿಡುತ್ತದೆ. ಆದರೆ ಬೋಟ್‌ನಲ್ಲಿದ್ದ ಆಸಿಸ್ನ ಬ್ರೋಡಿ ಮಾಸ್ ಮಾತ್ರ ಯಾವುದೇ ರೀತಿ ಭೀತಿಗೊಳಗಾಗದೆ ಹಾವಿನ ಜೊತೆ ಮಾತನಾಡುತ್ತ ಬೋಟಿಗೆ ಆಹ್ವಾನ ನೀಡಿದ್ದಾನೆ. ಆತ ಅದನ್ನು ವೀಡಿಯೋ ಮಾಡಿಕೊಂಡಿದ್ದು, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸದ್ದು ಮಾಡುತ್ತಿದೆ.
ಸಮುದ್ರದ ಮಧ್ಯಭಾಗಕ್ಕೆ ಬೋಟ್ ಕೊಂಡೊಯ್ದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಬ್ರೋಡಿ ಮಾಸ್‌ಗೆ ಈ ಹಾವು ಕಂಡಿದೆ. ಹಾವುಗಳನ್ನು ಕಂಡಾಗ ಜನರು ಸಹಜವಾಗಿ ಬೆಚ್ಚಿಬೀಳುತ್ತಾರೆ. ಆದರೆ ಬ್ರೋಡಿ ಮಾಸ್ ಮಾತ್ರ 'ಹಾವು' ಕಂಡ ತಕ್ಷಣ ಅಲರ್ಟ್ ಆಗಿ, ವೀಡಿಯೋ ಮಾಡಿದ್ದಾನೆ. ಆರಾಮಾಗಿ ಈಜುತ್ತಾ ಬಂದ ಆ ಹಾವು ಬೋಟ್ ತಲೆ ಇಟ್ಟು ಮತ್ತೆ, ಅಲ್ಲಿಂದ ವಾಪಸ್ ಸಮುದ್ರದ ಒಳಗೆ ಮಾಯವಾಗಿದೆ.
ಹಾವು ಬೋಟ್ ಬಳಿ ಬಂದಿದ್ದನ್ನು ಹಾಗೂ ಹಾವಿನ ವರ್ತನೆ ವರ್ಣಿಸಿರುವ ಬ್ರೋಡಿ, ಹಾವಿನ ಈ ವರ್ತನೆ ಅದರ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಕಾಣುತ್ತೆ ಎಂದಿದ್ದಾನೆ. ಕುತೂಹಲದಿಂದ ಸಂಗಾತಿ ಸಿಗಬಹುದೆಂದು ಹಾವು ಬೋಟ್ ಬಳಿ ಬಂದಿದೆ ಎಂದಿದ್ದಾನೆ . ಏಕೆಂದರೆ ಸಾಮಾನ್ಯವಾಗಿ ಈ ಹಾವುಗಳು ಮನುಷ್ಯರು ಅಥವಾ ಯಾವುದೇ ಅಪರಿಚಿತ ವಸ್ತು ಕಂಡರೆ ದೂರ ಸರಿಯುತ್ತವೆ. ಆದರೆ ಸಮುದ್ರದ ನಡುವೆ ದಿಢೀರ್ ಪ್ರತ್ಯಕ್ಷ್ಯವಾಗಿದ್ದ ಹಾವು ಬೋಟ್‌ನ ಸಮೀಪವೇ ಓಡಿ ಬಂದಿದೆ. ಇದು ಹಾವು ಮೈಮರೆತಿದ್ದರ ಲಕ್ಷಣವಾಗಿದೆ, ಬಹುಶಃ ಇದು ಸಂತಾನೋತ್ಪತ್ತಿಗೆ ಚಡಪಡಿಸಿದೆ ಎಂದಿದ್ದಾನೆ ಬ್ರೋಡಿ ಮಾಸ್.
ನೆಲದ ಮೇಲೆ ಹರಿದಾಡುವ ಹಾವುಗಳಂತೆ ಸಮುದ್ರದಲ್ಲಿ ವಾಸಿಸುವ ಹಾವುಗಳು ಕೂಡ ವಿಷಕಾರಿಯಾಗಿರುತ್ತದೆ. ಈ ಪೈಕಿ ಬಹುತೇಕ ಹಾವುಗಳು ಕಚ್ಚಿದರೆ ಸಾಕು ಮನುಷ್ಯ ಉಳಿಯೋದೆ ಡೌಟ್. ನೂರಾರು ಜಾತಿಯ ಹಾವುಗಳನ್ನು ಸಮುದ್ರದಲ್ಲೂ ಕಾಣಬಹುದು. ಸಾಮಾನ್ಯವಾಗಿ ಸಮುದ್ರದ ಆಳದಲ್ಲೇ ಜೀವಿಸುವ ಸಮುದ್ರದ ಹಾವುಗಳು, ದಡಕ್ಕೆ ಬರುವುದು ಬಲು ಅಪರೂಪ. ಇವುಗಳಿಗೆ ಸಮುದ್ರದಲ್ಲಿನ ಹುಳುಗಳು, ಸಣ್ಣಪುಟ್ಟ ಮೀನುಗಳೇ ಆಹಾರ.
“aurrrr how intimidating is this 😍😁” australians aren’t real people pic.twitter.com/ZA74EivkAs
— molls🧝🏼♀️ (@444molls) August 31, 2021