-->

ಗೌರಿಗಣೇಶ ಹಬ್ಬಕ್ಕೆ ಕೇವಲ 500 ರೂ.ಗೆ ಸಿಗಲಿದೆ ಜಿಯೋಫೋನ್​ ನೆಕ್ಸ್ಟ್​​!

ಗೌರಿಗಣೇಶ ಹಬ್ಬಕ್ಕೆ ಕೇವಲ 500 ರೂ.ಗೆ ಸಿಗಲಿದೆ ಜಿಯೋಫೋನ್​ ನೆಕ್ಸ್ಟ್​​!

ನವದೆಹಲಿ: ರಿಲಾಯನ್ಸ್​ ಜಿಯೋ ನೆಕ್ಸ್ಟ್​​ ಫೋನನ್ನು ವಿವಿಧ ಪಾವತಿ ವಿಧಾನದ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆ ಸ್ಮಾರ್ಟ್‌ಫೋನ್ ನೀಡಲು ಮುಂದಾಗಿದೆ ಎಂದು ಇಕಾನಾಮಿಕ್ಸ್​ ಟೈಮ್ಸ್ ಸೇರಿದಂತೆ ಹಲವಾರು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಈ ಜಿಯೋ ನೆಕ್ಸ್ಟ್ ಫೋನ್ ಅನ್ನು ಮುಂದಿನ 6 ತಿಂಗಳಲ್ಲಿ 50 ಮಿಲಿಯನ್​ ಯುನಿಟ್​ಗಳಲ್ಲಿ ಮಾರಾಟ ಮಾಡುವ ಗುರಿಯನ್ನು ಜಿಯೋ ಹೊಂದಿದೆ ಎನ್ನಲಾಗುತ್ತಿದೆ. 

ಗೌರಿಗಣೇಶ ಹಬ್ಬದ ಸಂದರ್ಭವೇ ಜಿಯೋ ನೆಕ್ಸ್ಟ್ ಫೋನನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸಂಚಲನ ಮೂಡಿಸಲಾಗುತ್ತದೆ ಎಂಬ ನಿರೀಕ್ಷೆ ಇರುವ ಬಗ್ಗೆಯೂ ವರದಿಯಾಗಿದೆ. ರಿಲಯನ್ಸ್ ಗ್ರೂಪ್ ಮಾಲಿಕ ಮುಖೇಶ್ ಅಂಬಾನಿ ಕೇವಲ 500 ರೂ.ಗೆ ಜಿಯೋಫೋನ್ ನೆಕ್ಸ್ಟ್ (JioPhone Next) ಸ್ಮಾರ್ಟ್‌ಫೋನನ್ನು ಖರೀದಿಸುವ ಅವಕಾಶವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಇಕಾನಾಮಿಕ್ಸ್ ಟೈಮ್ಸ್ ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ರಿಲಾಯನ್ಸ್ ಜಿಯೋ ಭಾರತದ ಹಲವಾರು ಬ್ಯಾಂಕ್ ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಮೂಲಕ ಜಿಯೋ ನೆಕ್ಸ್ಟ್ ಫೋನನ್ನು ವಿವಿಧ ಪಾವತಿ ವಿಧಾನದ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆ ಸ್ಮಾರ್ಟ್‌ಫೋನ್ ನೀಡಲು ಮುಂದಾಗಿದೆಯಂತೆ. ಮುಂದಿನ 6 ತಿಂಗಳು 50 ಮಿಲಿಯನ್ ಯುನಿಟ್ ಗಳಲ್ಲಿ ಮಾರಾಟ ಮಾಡುವ ಗುರಿಯನ್ನು ಹೊಂದಿರುವ ಜಿಯೋ ಇಂತಹದೊಂದು ಖರೀದಿಗೆ ಅವಕಾಶವನ್ನು ಕಲ್ಪಿಸಲಿದೆ ಎನ್ನಲಾಗುತ್ತಿದೆ.

ಮುಖೇಶ್ ಅಂಬಾನಿ ಬಿಗ್‌ಪ್ಲ್ಯಾನ್ ನಂತೆ, ಜಿಯೋ ನೂತನ ಸ್ಮಾರ್ಟ್‌ಪೋನ್‌ಗಳ ಬೆಲೆಗಳು ಮಾರುಕಟ್ಟೆಯ ಇತರೆ ಫೋನ್‌ಗಳ ಬೆಲೆಗಳಿಗಿಂತ ಕಡಿಮೆ ಇದ್ದರೂ ಸಹ, ಒಂದು ಬಾರಿ ಪಾವತಿ ಆಯ್ಕೆ ಜಾರಿಗೆ ತರುವ ಯೋಜನೆ ಕಾರ್ಯಸಾಧುವಲ್ಲ. ಹಾಗಾಗಿ, ಇನ್‌ಸ್ಟಾಲ್‌ಮೆಂಟ್‌ನಲ್ಲಿ ಜನತೆಗೆ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲು ಪ್ಲ್ಯಾನ್ ಮಾಡಿದ್ದಾರೆ. ಇದಕ್ಕಾಗಿ ರಿಲಯನ್ಸ್ ಜಿಯೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಿರಾಮಲ್ ಕ್ಯಾಪಿಟಲ್, ಐಡಿಎಫ್ಸಿ ಫಸ್ಟ್ ಅಶ್ಯೂರ್ಮತ್ತು ಡಿಎಮ್ಐ ಫೈನಾನ್ಸ್ ನೊಂದಿಗೆ ಕೈ ಜೋಡಿಸಿರುವ ಈಗಾಗಲೆ ಮಾಹಿತಿಗಳು ಲಭ್ಯವಾಗಿದೆ. 

ಇನ್ನು ಮಾಧ್ಯಮ ವರದಿಗಳ ಪ್ರಕಾರ, ರಿಲಯನ್ಸ್ ಎರಡು ಜಿಯೋಫೋನ್ ನೆಕ್ಸ್ಟ್ ಮಾದರಿ ಸ್ಮಾರ್ಟ್‌ಪೋನ್‌ ಗಳನ್ನು ಮೊಬೈಲ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಎಂದು ತಿಳಿದುಬಂದಿದೆ. ಅದರಲ್ಲಿ ಒಂದು ಬೇಸಿಕ್ ಫೀಚರ್ಸ್ ಹೊಂದಿರುವ ಜಿಯೋಫೋನ್ ನೆಕ್ಸ್ಟ್ (Basic JioPhone Next) ಆಗಿದ್ದು, ಇದರ ಬೆಲೆ ಮೂರರಿಂದ ನಾಲ್ಕು ಸಾವಿರ ರೂ. ಒಳಗೆ ಇರಬಹದು ಎಂದು ಹೇಳಲಾಗುತ್ತಿದೆ.ಮತ್ತೊಂದು ಅಡ್ವಾನ್ಸ್ ಜಿಯೋಫೋನ್ ನೆಕ್ಸ್ಟ್ (Advannce JioPhone Next) ಆಗಿದ್ದು, ಇದರ ಬೆಲೆ 7 ಸಾವಿರ ಇರಲಿದೆ ಎನ್ನಲಾಗುತ್ತಿದೆ. ವಿಶೇಷವೆಂದರೆ, ಜಿಯೋ ಮೂಲಗಳ ಪ್ರಕಾರ ಜಿಯೋ ಫೋನ್ ನೆಕ್ಸ್ಟ್ ಪ್ರಾರಂಭಿಕ ಬೆಲೆ ಜಿಯೋಫೋನ್ ನೆಕ್ಸ್ಟ್ 3,499 ರೂ.ಗಳಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಜಿಯೋ ಸ್ಮಾರ್ಟ್‌ಫೋನನ್ನು ಖರೀದಿಸುವ ವೇಳೆ ಒಂದೇ ಬಾರಿಗೆ ಪೂರ್ತಿ ಹಣ ನೀಡುವ ಅಗತ್ಯವಿಲ್ಲ. ಜಿಯೋಫೋನ್ ಬೇಸಿಕ್ ಜಿಯೋಫೋನ್ ನೆಕ್ಸ್ಟ್ ಫೋನಿಗೆ ಕೇವಲ 500 ರೂ.ಹಣವನ್ನು ನೀಡಿ ಖರೀದಿಸಬಹುದಾಗಿದ್ದು, ಅಡ್ವಾನ್ಸ್ ಜಿಯೋಫೋನ್ ನೆಕ್ಸ್ಟ್ ಅನ್ನು 700 ರೂ. ಪಾವತಿಸಿ ಉಳಿದ ಕಂತುಗಳ ರೂಪದಲ್ಲಿ ನಂತರ ಪಾವತಿಸಬೇಕಿದೆ ಎಂದು ಹೇಳಲಾಗುತ್ತಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99