ಒಂದೇ ದಿನ 4125 ಅಟಲ್ ಪೆನ್ಶನ್ ಖಾತೆ - ಕರ್ನಾಟಕ ವಿಕಾಸ ಗ್ರಾಮೀಣ ಹೊಸ ದಾಖಲೆ
ಮಂಗಳೂರು:ಪ್ರಮುಖ ಗ್ರಾಮೀಣ ಬ್ಯಾಂಕಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಒಂದೇ ದಿನ 4125 ಅಟಲ್ ಪಿಂಚಣಿ ಖಾತೆಗಳನ್ನು (ಏಪಿವೈ) ಮಾಡಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಸ್ತುತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಮಂಗಳೂರನ್ನು ಒಳಗೊಂಡು ೧೦ ಪ್ರಾದೇಶಿಕ ಕಾರ್ಯಾಲಯಗಳನ್ನು ಹೊಂದಿದ್ದು ಮಂಗಳವಾರದಂದು ಬ್ಯಾಂಕಿನ ಚಿಕ್ಕೋಡಿ ಪ್ರಾದೇಶಿಕ ಕಾರ್ಯಾಲಯ ಈ ಕೀರ್ತಿಗೆ ಭಾಜನವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ವಿಶಾಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಸೇವೆಗಳನ್ನು ತಲುಪಿಸಲು ಬ್ಯಾಂಕು ಪರಮಾದ್ಯತೆ ನೀಡುತ್ತಲಿದೆ. ರಾಷ್ಟ್ರೀಯ ಆದ್ಯತೆಯಾಗಿರುವ ಸಾಮಾಜಿಕ ಭದ್ರತಾ ಯೋಜನೆಗಳಾದ ಅಟಲ್ ಪಿಂಚಣಿ ಯೋಜನೆ (ಎಪಿವೈ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗಳ (ಪಿಎಂಎಸ್‌ಬಿವೈ) ಅನುಷ್ಠಾನದಲ್ಲಿ ಬ್ಯಾಂಕು ಅತ್ಯುತ್ತಮ ಕಾರ್ಯ ನಿರ್ವಹಿಸುವ ಮೂಲಕ ರಾಷ್ಟçದ ಗಮನ ಸೆಳೆದಿದೆ ಎಂದರು.
ಕೇAದ್ರ ಸರ್ಕಾರ ಈ ಯೋಜನೆಗಳನ್ನು ಪರಿಚಯಿಸಿದಾಗಿನಿಂದ ಬ್ಯಾಂಕು ಜೀವನ್ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ (ಸಂಚಿತ) 547830 ಪಾಲಿಸಿಗಳನ್ನು, ಸುರಕ್ಷಾ ಭೀಮಾ ಯೋಜನೆಗಳ ಅಡಿಯಲ್ಲಿ 1228320 ಪಾಲಿಸಿಗಳನ್ನು ಮತ್ತು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 225168 ಖಾತೆಗಳನ್ನು ದಾಖಲಿಸಿದೆ. ಅಟಲ್ ಪಿಂಚಣಿ ಯೋಜನೆ ಜನಸಾನ್ಯರ ಬದುಕಿಗೆ ಭದ್ರತೆ ನೀಡಿದರೆ, ಜೀವನ್ ಜ್ಯೋತಿ (ವರ್ಷಕ್ಕೆ ರೂ.330.00) ಮತ್ತು ಸುರಕ್ಷಾ ಭೀಮಾ ಯೋಜನೆಗಳು (ವರ್ಷಕ್ಕೆ ರೂ. 12) ದುಡಿಯುವ ಕೈಗಳ ಹಠಾತ್ ಮರಣದ ಸಂದರ್ಭದಲ್ಲಿ ಬಡ ಕುಟುಂಬಗಳು ಬೀದಿಗೆ ಬರುವ ದುಸ್ಥಿತಿಯನ್ನು ತಪ್ಪಿಸಿವೆ ಎಂದೂ ಗೋಪಿಕೃಷ್ಣ ಹೇಳಿದರು.
ಬ್ಯಾಂಕಿನ ಈ ಕಾರ್ಯವನ್ನು ಕೇಂದ್ರ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಏ) ಗುರುತಿಸಿದ್ದು ವಿವಿಧ ಆಯಾಮಗಳಲ್ಲಿ 10 ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿದೆ ಎಂದೂ ಗೋಪಿಕೃಷ್ಣ ಹೇಳಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಚಿಕ್ಕೋಡಿ ಪ್ರಾದೇಶಿಕ ವ್ಯವಸ್ಥಾಪಕ ರಮಾನಂದ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.