12 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ ವೃದ್ಧ...
Sunday, September 5, 2021
ಮಧುಗಿರಿ: ಮಧುಗಿರಿಯಲ್ಲೂ 12 ವರ್ಷದ ಬಾಲಕಿ ಮೇಲೆ ಕಾಮುಕ ವೃದ್ಧನೊಬ್ಬ ಅತ್ಯಾಚಾರವೆಸಗಿದ ಎಂಬ ಕೇಸ್ ದಾಖಲಾಗಿದೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆ-ತಾಯಿಗೆ ಟೀ ಮಾಡಿಕೊಡಲೆಂದು ಮನೆಗೆ ಬಂದ 12 ವರ್ಷದ ಬಾಲಕಿಯನ್ನು ಹಿಂಬಾಲಿಕೊಂಡೇ ಬಂದ 65 ವರ್ಷದ ವೃದ್ಧನೊಬ್ಬ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ ಎಂದು ಪಟ್ಟಣ ಠಾಣೆಗೆ ಬಾಲಕಿ ತಂದೆ ದೂರು ನೀಡಿದ್ದಾರೆ.
ಸಂಜೆಯಾಗುತ್ತಿದ್ದಂತೆ ಮನೆಗೆ ಹೋಗಿ ಟೀ ಮಾಡಿಕೊಂಡು ಬಾ ಎಂದು ಪಾಲಕರು ಮಗಳನ್ನು ಕಳುಹಿಸಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಬಸವನಹಳ್ಳಿ ಗ್ರಾಮದ ಲಿಂಗಣ್ಣ (65) ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ವಿಷಯ ಹೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೆದರಿಸಿದ್ದರಿಂದ ಬಾಲಕಿ ಯಾರ ಬಳಿಯೂ ವಿಷಯ ಹೇಳಿರಲಿಲ್ಲ. ಮೂರು ದಿನದ ನಂತರ ಬಾಲಕಿ ತಾಯಿಯ ಬಳಿ ವಿಷಯ ತಿಳಿಸಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಾಲಕಿಯ ತಂದೆ ಠಾಣೆಗೆ ದೂರು ನೀಡಿದ್ದಾರೆ.