
ಯಾವ ಬ್ರಾ ತೊಡುತ್ತೀರಿ ಎಂದು ಪ್ರಶ್ನಿಸಿದ ಅಭಿಮಾನಿ.. ಇದಕ್ಕೆ ನಟಿ ಕೊಟ್ಟ ಉತ್ತರ ಹೀಗಿದೆ ನೋಡಿ..
Sunday, September 5, 2021
ಚೆನ್ನೈ: ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ಸಂದರ್ಭ ಪ್ರಶ್ನೋತ್ತರ ಸೆಷನ್ ನಡೆಸಿದ್ದರು. ಈ ವೇಳೆ ನೆಟ್ಟಿಗರೊಬ್ಬರು ಒಳಉಡುಪಿನ ಬಗ್ಗೆ ಕೇಳಿದ ಪ್ರಶ್ನೆಗೆ ಅನಿಕಾ ಸ್ವಲ್ಪವೂ ಮುಜಗರಪಟ್ಟುಕೊಳ್ಳದೇ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನನಗೆ ಬ್ರಾಗಳ ಬಗ್ಗೆ ಸಲಹೆ ಬೇಕಿದೆ. ನೀವು ಯಾವುದನ್ನು ಬಳಸುತ್ತೀರಿ ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದ ಅನಿಕಾ, ಹತ್ತಿಯಲ್ಲಿ ಮಾಡಿದ ಸರಿಯಾದ ಗಾತ್ರದ ಬ್ರಾಗಳನ್ನು ನಿಮಗೆ ಸಲಹೆ ನೀಡುತ್ತೇನೆ. ಜಿವಾಮೆಯಂತಹ ಸೈಟ್ಗಳ ಮೂಲಕ ಆನ್ಲೈನ್ನಲ್ಲಿ ನಾನು ಖರೀದಿಸುತ್ತೇನೆ ಎಂದಿದ್ದಾರೆ.
ಲೈವ್ ಸ್ಕ್ರೀನ್ ಶಾಟ್ಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅನಿಕಾ ಶೇರ್ ಮಾಡಿಕೊಂಡಿದ್ದು, ಅವರ ಬೋಲ್ಡ್ನೆಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.