ಮೃತ ಪತಿಯ ಪ್ರತಿಮೆಯನ್ನು ತಯಾರಿಸಿ ದಿನನಿತ್ಯವೂ ಪೂಜೆ ಮಾಡುತ್ತಿರುವ ಪತ್ನಿ...
Friday, August 13, 2021
ವಿಜಯವಾಡ: ಮೃತ ಪತಿಯ ಅನುಪಸ್ಥಿತಿಯನ್ನು ಮರೆಯಲಾಗದ ಪತ್ನಿಯೊಬ್ಬಳು ಪತಿಯ ಪ್ರತಿಮೆಯನ್ನೇ ತಯಾರಿಸಿ ದೇವಸ್ಥಾನವನ್ನೇ ನಿರ್ಮಿಸಿದ್ದು, ನಿತ್ಯವು ಗಂಡನ ಆರಾಧನೆ ಮಾಡುತ್ತಿದ್ದಾಳೆ.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಪೊಡಿಲಿ ಮಂಡಲದ ನಿಮ್ಮಾವರಂ ಮೂಲದ ಪದ್ಮಾವತಿ ಎಂಬವರ ಪತಿ ನಾಲ್ಕು ವರ್ಷಗಳ ಹಿಂದೆ ಅಂಕಿ ರೆಡ್ಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ಪ್ರೀತಿಯ ಗಂಡನ ಅನುಪಸ್ಥಿತಿಯನ್ನು ಮರೆಯಲಾಗದ ಪದ್ಮಾವತಿ, ಆತನ ಶಾಶ್ವತ ನೆನಪಿಗಾಗಿ ಮಾರ್ಬಲ್ನಿಂದ ಗಂಡನ ಪ್ರತಿಮೆಯನ್ನು ತಯಾರಿಸಿ, ದೇವಸ್ಥಾನವನ್ನೇ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ದಿನನಿತ್ಯವೂ ಗಂಡನ ಪೂಜೆ ಮಾಡುತ್ತಾ ಬರುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪದ್ಮಾವತಿ ನನ್ನ ಗಂಡ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಹೀಗಾಗಿ ನಾನು ದೇವಸ್ಥಾನವನ್ನು ನಿರ್ಮಾಣ ಮಾಡಿ ದಿನವೂ ಪತಿಯ ಧ್ಯಾನದಲ್ಲಿ ತೊಡಗಿದ್ದೇನೆ ಎಂದಿದ್ದಾರೆ.