ಹಣಕ್ಕಾಗಿ ಬೆತ್ತಲೆಯಾಗುವವರನ್ನು ಬಹಿಷ್ಕರಿಸಿ- ಹಾಟ್ ನಟಿ ರಾಧಿಕಾ ಆಪ್ಟೆ ಗೂ ಬಹಿಷ್ಕಾರದ ಬಿಸಿ!
Friday, August 13, 2021
ಮುಂಬೈ: ನಟಿ ರಾಧಿಕಾ ಆಪ್ಟೆ ಅವರು ಹೆಚ್ಚಾಗಿ ಬೋಲ್ಡ್ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ರಾಧಿಕಾ ಆಪ್ಟೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಧಿಕಾ ಆಪ್ಟೆ ಅವರ ಹಳೆಯ ಪಾರ್ಚ್ಡ್ ಸಿನಿಮಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಅಜಯ್ ದೇವಗನ್ ನಿರ್ಮಾಣದ ಪಾರ್ಚ್ಡ್ ಚಿತ್ರದಲ್ಲಿ ರಾಧಿಕಾ, ನಟ ಆದಿಲ್ ಹುಸೈನ್ ಜತೆ ಬೆತ್ತಲೆ ದೃಶ್ಯಗಳಲ್ಲಿ ನಟಿಸಿದ್ದಾರೆ. ಪಾರ್ಚ್ಡ್ ಸಿನಿಮಾದ ಫೋಟೋಗಳನ್ನು ಟ್ವೀಟ್ ಮಾಡಿರುವ ನೆಟ್ಟಿಗರು ಬಾಲಿವುಡ್ ಸೆಲೆಬ್ರಿಟಿಗಳ ವರ್ತನೆಯನ್ನು ವಿರೋಧಿಸಿದ್ದಾರೆ.
ಪಾರ್ಚ್ಡ್ ಸಿನಿಮಾವು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ನೆಟ್ಟಿಗರು ಗುಡುಗಿದ್ದಾರೆ. ರಾಧಿಕಾ ಆಪ್ಟೆ ಕೇವಲ ಹಣಕ್ಕಾಗಿ ನಟಿಸುತ್ತಿದ್ದಾರೆ, ಭಾರತೀಯ ಸಂಪ್ರದಾಯಗಳಿಗೆ ವಿರುದ್ಧವಾಗಿ ಮತ್ತು ಮೌಲ್ಯಗಳನ್ನು ತ್ಯಜಿಸಿದ್ದಾರೆ ಎಂದು ಟೀಕಿಸಿದ್ದಾರೆ. ಬಾಲಿವುಡ್ ಇಂತಹವರಿಗೆ ಅವಕಾಶ ನೀಡಬಾರದೆಂದು ಕೆಲವರು ಸಲಹೆ ನೀಡಿದ್ದಾರೆ.