ಅಕ್ಕಿನೇನಿ ನಾಗಾರ್ಜುನ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದರ ಪ್ರೊಮೋ ಶೂಟ್ ಪೂರ್ಣಗೊಂಡಿದ್ದು ಆಗಸ್ಟ್ 15ರಿಂದ ಪ್ರೋಮೋ ಸ್ಟಾರ್ ಮಾ ಚಾನೆಲ್ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈಗಾಗಲೇ ಯಾವೆಲ್ಲ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಟಿಕ್ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ ಬಿಗ್ಬಾಸ್ ಮನೆ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಶೋನಲ್ಲಿ ಭಾರ್ಗವನ ಭಾಗವಹಿಸುವಿಕೆ ಆಯೋಜಕರಿಗೆ ಸ್ವಲ್ಪವು ಇಷ್ಟವಿಲ್ಲ. ಏಕೆಂದರೆ, ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಆರೋಪದಲ್ಲಿ ಈಗಾಗಲೇ ಜೈಲು ಸೇರಿ ಜಾಮೀನಿನ ಮೇಲೆ ಭಾರ್ಗವ ಬಿಡುಗಡೆ ಆಗಿದ್ದಾನೆ. ಈ ಪ್ರಕರಣ ತೆಲುಗು ರಾಜ್ಯಗಳಲ್ಲಿ ಭಾರಿ ಸುದ್ದಿಯಾಗಿದೆ. ಹೀಗಾಗಿ ಭಾರ್ಗವನನ್ನು ಶೋಗೆ ಆಹ್ವಾನಿಸಿ ಕಾರ್ಯಕ್ರಮದ ಮಾನ ಹರಾಜು ಹಾಕಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಹೀಗಾಗಿ ಆತನನ್ನು ತಿರಸ್ಕರಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.