ವಾಟ್ಸಪ್ನಲ್ಲಿ ಬಂತು ಹೊಸ ಫೀಚರ್.. ಈಗ ಇದೆ ವೀವ್ ಒನ್ಸ್ ಮೋಡ್ ಆಯ್ಕೆ
Wednesday, August 4, 2021
ಈ ಮೂಲಕ ವಾಟ್ಸ್ಆ್ಯಪ್ ತನ್ನ ಪ್ರೈವಸಿಯನ್ನು ಇನ್ನೂ ಒಂದು ಪಟ್ಟು ಹೆಚ್ಚು ಮಾಡಿದೆ. ಈ ಹೊಸ ಆಯ್ಕೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೀಡಲಾಗಿದೆ.
ವಾಟ್ಸ್ಆ್ಯಪ್ ಸದ್ಯ ತನ್ನ ಹೊಸ ಅಪ್ಡೇಟ್ ಪರಿಚಯಿಸಿದ್ದು ಬಳಕೆದಾರರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಹೊಸ ಅಪ್ಡೇಟ್ನಲ್ಲಿ ಬಳಕೆದಾರರು ತಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಫೊಟೋ ಅಥವಾ ವಿಡಿಯೋವನ್ನು ಕಳುಹಿಸಿದಾಗ ಒಮ್ಮೆ ಮಾತ್ರ ಕಾಣಿಸುವಂತೆ ಆಯ್ಕೆ ಮಾಡಬಹುದಾಗಿದೆ.
ವಾಟ್ಸ್ಆ್ಯಪ್ ಪರಿಚಯಿಸಿರುವ ಈ ಹೊಸ ಸಿಂಗಲ್ ವೀವಿಂಗ್ ಆಯ್ಕೆ ಅನೇಕರು ಮೆಚ್ಚಿಕೊಂಡಿದ್ದಾರೆ. ಫೋಟೊ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.