ಐಶ್ವರ್ಯ ರೈ ಅಂತೇನೆ ಕಾಣುವ ಆಶಿತಾ ಸಿಂಗ್..! ವಿಡಿಯೋ ಸಖತ್ ವೈರಲ್..
Wednesday, August 4, 2021
ಈಗ ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಮಾದರಿಯಲ್ಲೇ ಇರುವ ಮತ್ತೊಬ್ಬರು ಅಂತರ್ಜಾಲದಲ್ಲಿ ಸಕ್ಕತ್ ಸದ್ದು ಮಾಡುತ್ತಿದ್ದಾರೆ. ಅವರ ಹೆಸರು ಆಶಿತಾ ಸಿಂಗ್. ಇವರು ನೋಡುವುದಕ್ಕೆ ಐಶ್ವರ್ಯಾ ರೈಯಂತೆಯೇ ಕಾಣುತ್ತಾರೆ. ಇವರನ್ನು ಒಮ್ಮೆಲೇ ನೋಡಿದವರಿಗೆ ಇವರೇ ನಿಜವಾದ ಐಶ್ವರ್ಯಾ ರೈ ಎಂಬಂತೆ ಕಾಣಿಸುತ್ತಾರೆ.
ಬಾಲಿವುಡ್ ಹಾಡುಗಳಿಗೆ ದನಿಗೂಡಿಸುತ್ತಾ, ಐಶ್ವರ್ಯಾ ರೈ ಅವರ ಮಾದರಿಯಲ್ಲಿಯೇ ಕೆಲವು ಫೊಟೊಗಳನ್ನೂ ತೆಗೆಸಿಕೊಂಡಿರುವ ಆಶಿತಾ ಈಗ ಎಲ್ಲರ ಕಣ್ಮಣಿಯಾಗಿದ್ದಾರೆ. ಈಗಾಗಲೇ ಸುಮಾರು 27,000ದ ಸಮೀಪ ಅವರ ಅಭಿಮಾನಿ ಬಳಗವಿದ್ದು, ದಿನದಿಂದ ದಿನಕ್ಕೆ ಏರುತ್ತಲೇ ಇದೆ.