
ಅಪ್ಪ ಜೈಲು ಪಾಲು.. ಅಮ್ಮನ ಕಣ್ಣೀರು.. ಇನ್ಸ್ಟಾಗ್ರಾಂ ನಲ್ಲಿ ಮಗನ ಭಾವನಾತ್ಮಕ ಪೋಸ್ಟ್..!!
Wednesday, August 4, 2021
ಮುಂಬೈ: ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬ್ಲೂಫಿಲ್ಮ್ಂ ಕೇಸ್‌ನಲ್ಲಿ ಸಿಲುಕಿ ಜೈಲು ಪಾಲಾಗಿದ್ದಾರೆ.ಶಿಲ್ಪಾ ಶೆಟ್ಟಿ ವಿರುದ್ಧವೂ ಸಾಕಷ್ಟು ಆರೋಪಗಳು ಬರುತ್ತಿವೆ.
ಅವರ 9 ವರ್ಷದ ಮಗ ವಿಹಾನ್ ಕುಂದ್ರಾ ಎಲ್ಲ ವಿಷಯದ ಬಗ್ಗೆ ಕಂಗಾಲಾಗಿ ಹೋಗಿದ್ದಾನೆ. ಈ ಬಗ್ಗೆ ಏನನ್ನೂ ಮಾತನಾಡದ ಮಗ, ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದಾನೆ. ಇದರಲ್ಲಿ ಆತ ತನ್ನ ಅಮ್ಮ ಶಿಲ್ಪಾರನ್ನು ಅಪ್ಪಿಕೊಂಡಿರುವ ಫೋಟೋ ಇದೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತನ್ನ ಅಮ್ಮ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಹೇಳಿಕೆಯನ್ನು ವಿಹಾನ್ ಲಿಂಕ್ ಮಾಡಿದ್ದಾನೆ. ಕಾನೂನಿನ ಅನ್ವಯ ಎಲ್ಲಾ ಪ್ರಕ್ರಿಯೆ ನಡೆಯುತ್ತಿದೆ. ದಯವಿಟ್ಟು ಅಲ್ಲಿಯವರೆಗೆ ನಮ್ಮ ಕುಟುಂಬವನ್ನು ಗೌರವಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅರೆಬೆಂದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಬೇಡಿ. ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದರು. ಈ ಪೋಸ್ಟ್ ಅನ್ನು ವಿಹಾನ್ ಶೇರ್ ಮಾಡಿಕೊಂಡಿದ್ದಾನೆ.