Mangalore: ಉಳ್ಳಾಲದ ಮಾಜಿ ಶಾಸಕನ ಪುತ್ರನ ನಿವಾಸಕ್ಕೆ ಎನ್ಐಎ ದಾಳಿ- ಕಾರಣ ನಿಗೂಢ!
Wednesday, August 4, 2021
ಮಂಗಳೂರು: ನಗರದ ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಪುತ್ರ ಬಿ.ಎಂ.ಬಾಷಾ ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು ದಾಳಿನಡೆಸಿದ್ದಾರೆ.
ಬೆಂಗಳೂರಿನಿಂದ ಆಗಮಿಸಿರುವ ಎನ್ಐಎ ಅಧಿಕಾರಿಗಳ ತಂಡ ಇಂದು ಬೆಳ್ಳಂಬೆಳಗ್ಗೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ.ಬಾಷಾ ಅವರ ಮನೆಗೆ ದಾಳಿ ನಡೆಸಿದ್ದಾರೆ. ನಾಲ್ಕು ಕಾರಿನಲ್ಲಿ ಬಂದಿರುವ ತಂಡ ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ದಾಳಿ ನಡೆಸಿದೆ. ಬಿ.ಎಂ.ಬಾಷಾ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಬಿ ಎಂ ಬಾಷಾ ಅವರ ಮನೆಗೆ Nia ದಾಳಿ ಮಾಡಿದ ಕಾರಣ ಇನ್ನೂ ತಿಳಿದುಬಂದಿಲ್ಲ