
ಪ್ರೀತಿ ಮಾಡೋಲ್ಲ ಎಂದದ್ದಕ್ಕೆ ಕಪಾಳಕ್ಕೆ ಬಿಗಿದ ಮ್ಯಾನೇಜರ್: ಕುಸಿದು ಬಿದ್ದ ಯುವತಿ
Tuesday, August 3, 2021
ಬೆಂಗಳೂರು: ಪ್ರೀತಿಸೋಲ್ಲ ಎಂದು ಸಿಟ್ಟಿಗೆದ್ದ ಯುವಕನೊಬ್ಬ ಯುವತಿಯ ಕಪಾಳಕ್ಕೆ ಬಾರಿಸಿದ್ದು, ಹೊಡೆತದ ರಭಸಕ್ಕೆ ಯುವತಿ ದಿಢೀರ್ ಎಂದು ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಈ ಘಟನೆ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರುವ ಡೊಮಿನೊಸ್ ಪಿಜ್ಜಾ ಹಟ್ನಲ್ಲಿ ಘಟನೆ ನಡೆದಿದೆ.
ಡೊಮಿನೊಸ್ ಪಿಜ್ಜಾ ಹಟ್ನ ಮ್ಯಾನೇಜರ್, ಅಲ್ಲಿಯೇ ಕೆಲಸಕ್ಕಿದ್ದ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಆಕೆ ತನ್ನನ್ನು ಪ್ರೀತಿಸದೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಸಿಟ್ಟಾದ ಮ್ಯಾನೇಜರ್, ಯುವತಿಯ ಕಪಾಳಕ್ಕೆ ಬಾರಿಸಿದ್ದಾನೆ.
ಆತ ಹೊಡೆದ ರಭಸಕ್ಕೆ ಆಕೆ ಧೊಪ್ಪೆಂದು ಕೆಳಕ್ಕೆ ಬಿದ್ದಿದ್ದಾಳೆ. ಆಕೆ ಬೀಳುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಆದರೆ ಆಕೆ ಕೆಲಸ ಹೋಗುತ್ತದೆ ಎಂಬ ಭಯಕ್ಕೆ ಪೊಲೀಸರಿಗೆ ದೂರು ಕೊಟ್ಟಿಲ್ಲ ಎಂಬುದು ತಿಳಿದುಬಂದಿದೆ.