
ಒಂದೇ ಮನೆಯಲ್ಲಿ ಪತಿ-ಪತ್ನಿ, ಸ್ನೇಹಿತ...!!ಇವಳ ಎರಡನೇ ಲವ್ ಸ್ಟೋರಿಗೆ ಅಮಾಯಕ ಬಲಿ...
Wednesday, August 4, 2021
ಬೆಂಗಳೂರು: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಮದುವೆಯಾಗಿ ಬೆಂಗಳೂರಿಗೆ ಬಂದು ತನ್ನ ಗೆಳೆಯನ ಮನೆಯಲ್ಲೇ ತನ್ನ ಪತ್ನಿ ಜತೆಗೆ ತಂಗಿದ್ದ. ಆದರೀಗ ಆತ ಈಗ ದುರಂತ ಅಂತ್ಯಕಂಡಿದ್ದಾನೆ.
ಮಂಡ್ಯದ ಕೀಲಾರ ಮೂದವ ಕಾರ್ತಿಕ್ ಎಂಬಾತ ರಂಜಿತಾಳನ್ನು 5 ವರ್ಷದ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡು ಬೆಂಗಳೂರಿಗೆ ಬಂದಿದ್ದ. ಕಾರ್ತಿಕ್ನ ಸ್ನೇಹಿತ ಸಂಜೀವ್ ಮನೆಯಲ್ಲೇ ವಾಸವಿದ್ದ. ಈ ದಂಪತಿಗೆ 4 ವರ್ಷದ ಹೆಣ್ಣು ಮಗು ಕೂಡ ಇದೆ. ಇವರ ಜತೆಯಲ್ಲೇ ಸಂಜೀವ್ ಕೂಡ ವಾಸವಿದ್ದ. ಇವರಿಬ್ಬರೂ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದರು. ದಿನಕಳೆದಂತೆ ಕಾರ್ತಿಕ್ ಪತ್ನಿಯ ಮೋಹಕ್ಕೆ ಮನಸೋತ ಸಂಜೀವ್, ಆಕೆಯೊಂದಿಗೆ ಗೆಳೆಯನಿಗೆ ಗೊತ್ತಾಗದಂತೆ ಲವ್ವಿಡವ್ವಿ ಶುರು ಮಾಡಿದ್ದ. ರಂಜಿತಾ ತನ್ನ ಗಂಡ ಕಾರ್ತಿಕ್ ನನ್ನು ಕೊಲೆ ಮಾಡುವುದಕ್ಕೆ ಮುಹೂರ್ತ ಇಟ್ಟಿದ್ದಳು. ತಾವು ರೂಪಿಸಿದ್ದ ಪ್ಲಾನ್ನಂತೆ ಜುಲೈ 29ರಂದು ಕಾರ್ತಿಕ್ಗೆ ಕಂಠಪೂರ್ತಿ ಮದ್ಯ ಕುಡಿಸಿದ್ದ ಸಂಜೀವ್, ತನ್ನ ಮತ್ತೊಬ್ಬ ಸ್ನೇಹಿತ ಸುಬ್ರಹ್ಮಣಿ ಜತೆ ಕಾರ್ತಿಕ್ನನ್ನು ಆಟೋದಲ್ಲಿ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕಾರ್ತಿಕ್ ತಲೆಗೆ ದೊಣ್ಣೆಯಿಂದ ಹೊಡೆದು ಕುತ್ತಿಗೆ ಬಿಗಿದು ಕೊಂದ ಸಂಜೀವ್ ಮತ್ತು ಸುಬ್ರಹ್ಮಣಿ, ಶವವನ್ನು ಚೀಲದಲ್ಲಿ ತುಂಬಿ ಬೆಂಗಳೂರಿಗೆ ಆಟೋದಲ್ಲಿ ತಂದಿದ್ದರು. ಬಳಿಕ ಕುಂಬಳಗೋಡಿನ ಬಳಿ ವೃಷಭಾವತಿ ನದಿಗೆ ಎಸೆದು ಪರಾರಿಯಾಗಿದ್ದರು.
ಕೆಂಪೇಗೌಡನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಳು ಪತ್ನಿ ರಂಜಿತಾ. ತನಿಖೆ ಕೈಗೊಂಡ ಪೊಲೀಸರು ರಂಜಿತಾಳ ಮೇಲೆ ಅನುಮಾನಗೊಂಡು ವಿಚಾರಣೆಗೆ ಠಾಣೆಗೆ ಕರೆದಿದ್ದರು. ಈ ವೇಳೆ ರಂಜಿತಾಳ ಜತೆ ಪ್ರಿಯಕರ ಸಂಜೀವ್ ಕೂಡ ಬಂದಿದ್ದ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ