-->

ಮಹಾರಾಷ್ಟ್ರದ ಪುಟ್ಟ ಕಂದನಿಗೆ 16 ಕೋಟಿ ರೂ. ಮೌಲ್ಯದ ಇಂಜೆಕ್ಷನ್ ನ್ನು ಉಚಿತವಾಗಿ ನೀಡಿದ ಅಮೆರಿಕಾ ಕಂಪನಿ

ಮಹಾರಾಷ್ಟ್ರದ ಪುಟ್ಟ ಕಂದನಿಗೆ 16 ಕೋಟಿ ರೂ. ಮೌಲ್ಯದ ಇಂಜೆಕ್ಷನ್ ನ್ನು ಉಚಿತವಾಗಿ ನೀಡಿದ ಅಮೆರಿಕಾ ಕಂಪನಿ

ನಾಸಿಕ್: ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದ ಎರಡು ವರ್ಷದ ಮಗುವಿನ ಚಿಕಿತ್ಸೆಗೆ ಅಗತ್ಯವಿದ್ದ 16 ಕೋಟಿ ರೂ. ಮೌಲ್ಯದ ಇಂಜೆಕ್ಷನ್ ಅನ್ನು ಅಮೆರಿಕ  ಮೂಲದ ಕಂಪನಿಯೊಂದು ಉಚಿತವಾಗಿ ನೀಡಿ ಪುಟ್ಟ ಕಂದಮ್ಮನ ಪ್ರಾಣ ಉಳಿಸಲು ಸಹಕರಿಸಿದೆ.

ಮಹಾರಾಷ್ಟ್ರದ ನಾಸಿಕ್‌ ನಿವಾಸಿ  ವಿಶಾಲ್ ದವಾರೆ ಎಂಬವರ ಮಗು ಶಿವರಾಜ್ ದವಾರೆಯ ಮಾರಕ ಕಾಯಿಲೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿತ್ತು. ಈ ಮಗುವಿನ ಜೀವ ಉಳಿಸುವ 16 ಕೋಟಿ ರೂ. ಮೌಲ್ಯದ ಇಂಜೆಕ್ಷನ್ ಅನ್ನು ಅಮೆರಿಕದ ಸಂಸ್ಥೆಯೊಂದು ಉಚಿತವಾಗಿ ನೀಡುತ್ತಿದೆ. ಲಕ್ಕಿ ಡ್ರಾದಲ್ಲಿ ಈ ಕೊಡುಗೆ ಲಭ್ಯವಾಗಿದ್ದು, ಈ ರೀತಿ ಉಚಿತ ಇಂಜೆಕ್ಷನ್ ಪಡೆಯುತ್ತಿರುವ ಭಾರತದ ಮೊದಲ ರೋಗಿ ಎನಿಸಿಕೊಂಡಿದ್ದಾನೆ.

ಶಿವರಾಜ್ ದವಾರೆ ಎಂಬ ಪುಟ್ಟ ಮಗು, ಬಹು ಅಪರೂಪದ ಕಾಯಿಲೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ (ಎಸ್‌ಎಂಎ) ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಈ ಮಗುವನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ನರರೋಗತಜ್ಞ ಡಾ. ಬೃಜೇಶ್ ಉದಾನಿ ಅವರು ಶಿವರಾಜ್ ಜೀವ ಉಳಿಸಲು ಜೊಲ್ಗೆನ್‌ಸ್ಮಾ ಇಂಜೆಕ್ಷನ್ ಒಂದೇ ಆಯ್ಕೆ ಎಂದಿದ್ದರು. ಆದರೆ ಅದನ್ನು ಪಡೆಯುವಷ್ಟು ಹಣ ಈ ಮಗುವಿನ ಪೋಷಕರ ಬಳಿ ಇರಲಿಲ್ಲ.

ಅಮೆರಿಕ ಮೂಲದ ಕಂಪೆನಿಯೊಂದು ಕ್ಲಿನಿಕಲ್ ಪ್ರಯೋಗಗಳನ್ನು ಮಾಡುವುದಕ್ಕಾಗಿ ನಡೆಸುವ ಲಾಟರಿ ಯೋಜನೆಗೆ ಅರ್ಜಿಸಲ್ಲಿಸುವಂತೆ ವೈದ್ಯರು ಆ ಕುಟುಂಬಕ್ಕೆ ಸಲಹೆ ನೀಡಿದ್ದರು. ಅದೃಷ್ಟವಿದ್ದರೆ ಆ ಇಂಜೆಕ್ಷನ್ ಉಚಿತವಾಗಿ ಸಿಗಬಹುದು ಎಂದು ಅವರು ಹೇಳಿದ್ದರು. 2020ರ ಡಿಸೆಂಬರ್ 25ರಂದು ನಡೆದ ಲಕ್ಕಿ ಡ್ರಾದಲ್ಲಿ ಶಿವರಾಜ್ ಹೆಸರು ಬಂದಿತ್ತು. 2021ರ ಜನವರಿ 19ರಂದು ಪುಟಾಣಿಗೆ ಇಂಜೆಕ್ಷನ್ ನೀಡಲಾಗಿತ್ತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99