'ನಾನು ನಿನ್ನ ಜೊತೆಗಿದ್ದೇನೆ' ಎಂದು ಇನ್ಸ್ಟಾಗ್ರಾಂನಲ್ಲಿ ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಶಮಿತಾ ಶೆಟ್ಟಿ
Wednesday, August 4, 2021
ಮುಂಬೈ: ನಟಿ ಶಿಲ್ಪಾ ಶೆಟ್ಟಿಯವರು, ಪತಿ ರಾಜ್ ಕುಂದ್ರಾ ಅಶ್ಲೀಲ ವೀಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಬಂಧನಕ್ಕೊಳದ ಬಳಿಕ, ನಿನ್ನೆಯಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅವರು ಇನ್ ಸ್ಟ್ರಾಗ್ರಾಂ ಮೂಲಕ ಬರೆಯುತ್ತಾ ‘ಕಾನೂನು ರೀತಿ ಕ್ರಮ ಜರುಗಲಿ, ಮೀಡಿಯಾ ಟ್ರಯಲ್ ಬೇಡ. ಅರ್ಧಂಬರ್ಧ ತಿಳಿದು ಕಾಮೆಂಟು ಮಾಡಬೇಡಿ’ ಎಂದು ಕೇಳಿಕೊಂಡಿದ್ದ ಶಿಲ್ಪಾ, ಮಾಧ್ಯಮದಲ್ಲಿ ತಮ್ಮ ಬಗ್ಗೆ ಅನಗತ್ಯ ಆರೋಪಗಳು ಬರುತ್ತಿವೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರ ಸಹೋದರಿ ಶಮಿತಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಶಮಿತಾ ಶೆಟ್ಟಿ ಪ್ರತಿಕ್ರಿಯಿಸಿ “ಲವ್ ಯೂ ಮೈ ಮುನ್ಕಿ” ಎಂದು ಅಕ್ಕನನ್ನು ಸಂಬೋಧಿಸಿ, “ನಾನು ನಿನ್ನೊಂದಿಗಿದ್ದೇನೆ… ಕಷ್ಟದಲ್ಲಿ, ಸುಖದಲ್ಲಿ… ಯಾವಾಗಲೂ” ಎಂದು ಬರೆದು ಕೊಂಡಿದ್ದಾರೆ.