MANGALORE: ಐಸಿಸ್ ಸಂಪರ್ಕದ ಶಂಕೆ- ದೇಶದ ವಿವಿಧೆಡೆ ನಾಲ್ವರನ್ನು ವಶಕ್ಕೆ ಪಡೆದ ಎನ್ ಐ ಎ- ಮಂಗಳೂರಿನ ಮಾಜಿ ಶಾಸಕರ ಕುಟುಂಬದ ವ್ಯಕ್ತಿಯೂ ವಶಕ್ಕೆ
Wednesday, August 4, 2021
ಮಂಗಳೂರು: ಐಸಿಸ್ ಸಂಪರ್ಕದ
ಶಂಕೆಯ ಹಿನ್ನೆಲೆಯಲ್ಲಿ ಇಂದು ದೇಶದ ವಿವಿಧೆಡೆ ದಾಳಿ
ನಡೆಸಿದ ಎನ್ ಐ ಎ ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ
ಪಡೆದಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
NATIONAL
INVESTIGATION AGENCY (NIA) ಅಧಿಕಾರಿಗಳು ಜಮ್ಮುಕಾಶ್ಮೀರದ ಬಂಡೀಪೊರ ಮತ್ತು ಶ್ರೀಗರ , ಕರ್ನಾಟಕದ
ಮಂಗಳೂರು ಮತ್ತು ಬೆಂಗಳೂರಿನಲ್ಲಿ ಒಟ್ಟು ನಾಲ್ವರನ್ನು ವಶಕ್ಕೆ ಪಡೆದಿದೆ.
ಮಂಗಳೂರಿನಲ್ಲಿ ಮಾಜಿ
ಶಾಸಕರ ಕುಟುಂಬದ ವ್ಯಕ್ತಿ ವಶಕ್ಕೆ
ಮಂಗಳೂರಿನಲ್ಲಿ ಉಳ್ಳಾಲದ ಮಾಜಿ ಶಾಸಕ ಬಿ ಎಂ ಇದಿನಬ್ಬ ಅವರ ಪುತ್ರ
ಬಿ ಎಂ ಬಾಷಾ ಅವರ ಮನೆಗೆ ಎನ್ ಐ ಎ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದರು. ಮನೆಯ ಸದಸ್ಯರ
ತಪಾಸಣೆ ನಡೆಸಿದ ಬಳಿಕ ವಿಚಾರಣೆಗಾಗಿ ಕುಟುಂಬದ ಸದಸ್ಯನೋರ್ವನನ್ನು ವಶಕ್ಕೆ ಪಡೆದಿದೆ.