
VIDEO: 14 ಸಾವಿರ ಮೊಳೆಗಳಲ್ಲಿ ಮೂಡಿಬಂದ ಗಣಪ.. ತಿಲಕ್ ಕುಲಾಲ್ ಅವರ ಕೈಚಳಕದ ವೀಡಿಯೋ ಇಲ್ಲಿದೆ ನೋಡಿ...
ಮೂಡುಬಿದಿರೆ: ಉದಯೋನ್ಮುಖ ಯುವ ಕಲಾವಿದನ ಕೈ ಚಳಕದಲ್ಲಿ ಮೂಡಿದ ಮೊಳೆ ಗಣಪ ಮೂಡಿಬಂದಿದೆ.
ಲೀಫ್ ಆರ್ಟ್, ಚಾರ್ಕೋಲ್ ಆರ್ಟ್ ಮೂಲಕ ಮನೆ ಮಾತಾಗಿರುವ ಯುವ ಕಲಾವಿದ ತಿಲಕ್ ಕುಲಾಲ್, ಇವರು ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಬಿವಿಎ ವ್ಯಾಸಂಗ ಮಾಡುತ್ತಿದ್ದಾರೆ.
ತಿಲಕ್ ಕುಲಾಲ್ ರವರು ತಮ್ಮ ಕೈಚಳಕದ ಮೂಲಕ ಹಲವಾರು ಲೀಫ್ ಆರ್ಟ್ ಹಾಗೂ ಚಾರ್ಕೋಲ್ ಆರ್ಟ್ ಗಳನ್ನು ರಚಿಸಿದ್ದಾರೆ. ಲೀಫ್ ಆರ್ಟ್ ಹಾಗೂ ಚಾರ್ಕೋಲ್ ಆರ್ಟ್ ಮೂಲಕ ಸದ್ದು ಮಾಡುತ್ತಿದ್ದ ಯುವ ಕಲಾವಿದ, ಇಂದು ಒಂದು ಹೊಸ ಪ್ರಯೋಗದ ಮೂಲಕ ಕಲಾಕೃತಿಯನ್ನು ರಚಿಸಿದ್ದಾರೆ.
ಯಾವತ್ತೂ ಪೇಪರ್, ಪೆನ್ಸಿಲ್, ಬ್ಲೇಡ್, ಲೀಫ್ ಮುಖಾಂತರ ಕಲಾಕೃತಿಗಳನ್ನು ರಚಿಸುತ್ತಿದ್ದ ಕಲಾವಿದ ಇಂದು ಸುತ್ತಿಗೆ, ಮೊಳೆ ಮುಖಾಂತರ ಒಂದು ಅದ್ಭುತವಾದ ವಿಘ್ನ ವಿನಾಶಕನ ಕಲಾಕೃತಿಯನ್ನು ರಚಿಸಿದ್ದಾರೆ. ಬರೋಬ್ಬರಿ 14,450 ಕಬ್ಬಿಣದ ಮೊಳೆಯನ್ನು ಬಳಸಿ ಹಲಗೆಯಲ್ಲಿ ವಿನಾಯಕನ ಕಲಾಕೃತಿಯನ್ನು ರಚಿಸಿದ್ದಾರೆ. ತಿಲಕ್ ರವರ ನಿರಂತರ ಪರಿಶ್ರಮದ ಫಲ ಇಂದು ನಿಮ್ಮ ಮುಂದೆ ಇದೆ.