ಡಿಗ್ರಿಗೆ ಸೇರುವುದು ಬೇಡ ಎಂದು ಅಮ್ಮ ಹೇಳಿದ್ದಕ್ಕೆ ಮಗಳು ನೇಣಿಗೆ ಶರಣು..!
Sunday, August 8, 2021
ದಾವಣಗೆರೆ: ಪದವಿ ವ್ಯಾಸಂಗ ಮಾಡುವುದು ಬೇಡ ಎಂದು ಹೇಳಿದ ಕಾರಣಕ್ಕೆ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉಜ್ಜಪ್ಪ ವಡೆಯರಹಳ್ಳಿಯಲ್ಲಿ ನಡೆದಿದೆ.
ಉಜ್ಜಪ್ಪ ವಡೆಯರಹಳ್ಳಿ ಗ್ರಾಮದ ರಕ್ಷಿತಾ (19) ಮೃತ ದುರ್ದೈವಿ. ಈಕೆ ಚಂದ್ರಮ್ಮ-ನಾಗರಾಜ್ ದಂಪತಿಯ ಪುತ್ರಿ. ಈಕೆಯ ತಂದೆ ಮೃತಪಟ್ಟಿದ್ದಾರೆ. ಹಾಗಾಗಿ ತಾಯಿಯೇ ಕುಟುಂಬ ನಿರ್ವಹಣೆ ಮಾಡಬೇಕಿತ್ತು. ಮನೆಯಲ್ಲಿ ಬಡತನ ಇರುವ ಕಾರಣಕ್ಕೆ ಡಿಗ್ರೀಗೆ ಸೇರುವುದು ಬೇಡ ಎಂದು ತಾಯಿ ಹೇಳಿದ್ದರು. ಈ ಕಾರಣಕ್ಕೆ ಬೇಸರದಿಂದ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.