
ಪ್ರೀತಿಸಿ ಮದುವೆಯಾದ ಯುವತಿಯ ದುರಂತ ಅಂತ್ಯ- ಮೃತದೇಹಕ್ಕಾಗಿ ಶೋಧ ..
Sunday, August 8, 2021
ಹಾಸನ: ಮನೆಯಲ್ಲಿ ಎಷ್ಟೇ ಬೇಡ ಎದರೂ ಅವರ ಮಾತು ಕೇಳದೆ ಪ್ರೀತಿಸಿದಾತನನ್ನೇ ಮದುವೆಯಾಗಿದ್ದ ಯುವತಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನದಿಗೆ ಹಾರಿ ಪ್ರಾಣ ಬಿಟ್ಟಿದ್ದಳು.ಈ ಘಟನೆ ನಡೆದು ಐದು ದಿನಗಳಾದರೂ ಕೂಡ ಆಕೆಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ (20) ಮೃತ ದುರ್ದೈವಿ. ಸಕಲೇಶಪುರದ ಅಶ್ವಥ್ ಮತ್ತು ಶೃತಿ ಪ್ರೀತಿಸಿ ಮದುವೆಯಾಗಿದ್ದರು.
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ, ಹೇಮಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಪೂಜಾ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ನಡೆದು ಐದು ದಿನಗಳು ಕಳೆದಿವೆ. ಆದರೆ ಪೂಜಾಳ ದೇಹ ಇನ್ನೂ ಸಿಗುತ್ತಿಲ್ಲ. ಮಗಳ ಮೃತ ದೇಹ ಸಿಗದೆ ದಿನವೂ ಹೊಳೆಯ ಬಳಿ ದಿನವೂ ತಂದೆ ತಾಯಿ ರೋಧಿಸುತ್ತಿದ್ದಾರೆ. ಹೇಮಾವತಿ ನದಿಯಲ್ಲಿ ಶೃತಿ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.