-->
ಸಂಸದ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ..ಸುಪ್ರೀಂಕೋರ್ಟ್ ಮುಂದೆ ಬೆಂಕಿ ಹಚ್ಚಿಕೊಂಡು ಸಂತ್ರಸ್ತೆ ಸಾವು...

ಸಂಸದ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ..ಸುಪ್ರೀಂಕೋರ್ಟ್ ಮುಂದೆ ಬೆಂಕಿ ಹಚ್ಚಿಕೊಂಡು ಸಂತ್ರಸ್ತೆ ಸಾವು...

 
ಲಖನೌ: ಪೂರ್ವ ಉತ್ತರ ಪ್ರದೇಶ ಮೂಲದ 24 ವರ್ಷದ ಯುವತಿ ಕಳೆದ ವಾರ  ಬಿಎಸ್​ಪಿ ಸಂಸದ ಅತುಲ್​ ರಾಯ್​ ನನ್ನ ಮೇಲೆ ರೇಪ್​ ಮಾಡಿದ್ದಾರೆಂದು ಆರೋಪಿಸಿ ಸುಪ್ರೀಂಕೋರ್ಟ್​ ಹೊರಭಾಗದ ಗೇಟ್​ ಮುಂದೆ ಬೆಂಕಿ ಹಂಚಿಕೊಂಡಿದ್ದಳು. ಆದರೆ, ಈಗ ಚಿಕಿತ್ಸೆ ಫಲಕಾರಿಯಾಗದೇ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. 

ಯುವತಿಯ ಬಾಯ್​ಫ್ರೆಂಡ್​ ಕೂಡ ಕಳೆದ ವಾರ ಆಕೆಯ ಜತೆಯಲ್ಲೇ ಬೆಂಕಿ ಹಚ್ಚಿಕೊಂಡಿದ್ದ. ಇಬ್ಬರನ್ನು ದೆಹಲಿಯ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರಗೆ ದಾಖಲಿಸಲಾಗಿತ್ತು. ಬಾಯ್​ಫ್ರೆಂಡ್​ ಕಳೆದ ಶನಿವಾರ ಮೃತಪಟ್ಟರೆ, ಸಂತ್ರಸ್ತ ಯುವತಿ ಆಗಸ್ಟ್​ 24 ರಂದು ಕೊನೆಯುಸಿರೆಳೆದಿದ್ದಾಳೆ. 


ಸಂತ್ರಸ್ತೆ ತನ್ನ ಬಾಯ್​ಫ್ರೆಂಡ್​ ಜತೆ ದೆಹಲಿಗೆ ಪ್ರಯಾಣ ಬೆಳೆಸಿ ಆಗಸ್ಟ್​ 16ರಂದು ತಮಗೆ ತಾವೇ ಬೆಂಕಿ ಹಚ್ಚಿಕೊಳ್ಳುವ ಮುನ್ನ ಫೇಸ್​ಬುಕ್​ ಲೈವ್​ ವಿಡಿಯೋ ಮಾಡಿದ್ದರು. ವಾರಾಣಸಿ ಪೊಲೀಸರು ಸಂಸದ ಮತ್ತು ಆತನ ಸಂಬಂಧಿಕರಿಗೆ ಸಹಕಾರ ನೀಡುತ್ತಿದ್ದಾರೆ. ನಮ್ಮಿಬ್ಬರಿಗೂ ಯಾವುದೇ ನ್ಯಾಯ ದೊರೆಯಲಿಲ್ಲ ಎಂದು ಹೇಳಿದರು. ತಾವು ಎಲ್ಲಿಂದ ಲೈವ್​ ಮಾಡುತ್ತಿದ್ದೇವೆ ಎಂಬುದನ್ನು ಬಹಿರಂಗಪಡಿಸದೇ ಸಾವಿನ ಬಗ್ಗೆ ಸಂತ್ರಸ್ತೆ ಮಾತನಾಡಿದ್ದಳು. ಇದಾದ ಬಳಿಕ ಇಬ್ಬರು ಸುಪ್ರೀಂಕೋರ್ಟ್​ ಹೊರಭಾಗದ ಗೇಟಿನ ಮುಂದೆ ಸಂತ್ರಸ್ತೆ ಮತ್ತು ಬಾಯ್​ಫ್ರೆಂಡ್​ ತಮ್ಮನ್ನು ತಾವು ಬೆಂಕಿ ಹಚ್ಚಿಕೊಂಡರು. ಬೆಂಕಿಯನ್ನು ಆರಿಸಿ ತಕ್ಷಣ ಅವರನ್ನು ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99