
ಪ್ರೀತಿಯ ಪತ್ನಿಯ ಅಗಲಿಕೆ ನೋವು ಸಹಿಸದೆ ಅಂತ್ಯಕ್ರಿಯೆ ವೇಳೆ ಚಿತೆಗೆ ಹಾರಿದ ಪತಿ
ಭವಾನಿಪಟ್ನಾ (ಒಡಿಶಾ): ಪತಿ ಪತ್ನಿಯ ಚಿತೆಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ಒಡಿಶಾದ ಕಾಲಹಂದಿ ಜಿಲ್ಲೆಯ ಗೋಲಮುಂಡ ತಾಲ್ಲೂಕಿನ ಸಿಯಾಲ್‌ಜೋಡಿ ಗ್ರಾಮದಲ್ಲಿ ನಡೆದಿದೆ.
ನೀಲಮಣಿ ಸಬರ್ (65) ಚಿತೆಗೆ ಹಾರಿದ ವ್ಯಕ್ತಿ. ಇವರು ತನ್ನ ಪತ್ನಿ ರಾಯಿಬರಿ (60) ಅವರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಮುಗಿಸಿದ ನಂತರ ನಾಲ್ವರು ಪುತ್ರರು ಮತ್ತು ಅಂತ್ಯಕ್ರಿಯೆಗೆ ಹೋದ ಸಂಬಂಧಿಕರು ಸಂಪ್ರದಾಯದಂತೆ ಸ್ನಾನಕ್ಕೆ ಹೋಗಿದ್ದರು. ಆ ಸಮಯದಲ್ಲಿ ಯಾರೂ ಇಲ್ಲದ್ದನ್ನು ನೋಡಿ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಕುಟುಂಬಸ್ಥರು ಸ್ಥಳಕ್ಕೆ ಬಂದಾಗಲೇ ವಿಷಯ ತಿಳಿದಿದೆ. ನೀಲಮಣಿ ಅವರು ಗ್ರಾಮ ಪಂಚಾಯಿತಿ ಸಮಿತಿಯ ಮಾಜಿ ಸದಸ್ಯರಾಗಿದ್ದರು.