-->

 MANGALORE: ಕೊರೊನಾ ಭಯದಲ್ಲಿ ಸಾವನ್ನಪ್ಪಿದ್ದ ದಂಪತಿಗಳಲ್ಲಿ ನೆಗೆಟಿವ್ ರಿಪೊರ್ಟ್-ಮನ ಕಲುಕುತ್ತೆ ಸಾವಿಗೆ ಮುನ್ನ ಮಾತನಾಡಿದ ಆಡಿಯೋ-(video)

MANGALORE: ಕೊರೊನಾ ಭಯದಲ್ಲಿ ಸಾವನ್ನಪ್ಪಿದ್ದ ದಂಪತಿಗಳಲ್ಲಿ ನೆಗೆಟಿವ್ ರಿಪೊರ್ಟ್-ಮನ ಕಲುಕುತ್ತೆ ಸಾವಿಗೆ ಮುನ್ನ ಮಾತನಾಡಿದ ಆಡಿಯೋ-(video)


 


ಮಂಗಳೂರು: ಇಂದು ಬೆಳಿಗ್ಗೆ ಕೊರೊನಾ ಇದೆಯೆಂದು ಆತ್ಮಹತ್ಯೆ ಮಾಡಿಕೊಂಡ ದಂಪತಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಅವರಿಗೆ ಕೊರೊನಾ ನೆಗೆಟಿವ್ ಇರುವುದು ಬೆಳಕಿಗೆ ಬಂದಿದೆ.

 


 ತಮಗೆ ಕಾಡುತ್ತಿರುವ ಸಮಸ್ಯೆಗಳನ್ನು ಕೊರೊನಾ ಎಂದು ಕಲ್ಪಿಸಿಕೊಂಡು ಈ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು , ಇಲ್ಲದ ಕೊರೊನಾಕ್ಕಾಗಿ ತಮ್ಮ ಪ್ರಾಣವನ್ನೆ ಕಳೆದುಕೊಂಡ ದಂಪತಿಗಳ ನಿರ್ಧಾರ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.  ರಮೇಶ್ ಕುಮಾರ್ ಮತ್ತು ಗುಣ ಎಂಬ ದಂಪತಿಗಳು ಕೊರೊನಾ ಭಯದಲ್ಲಿ ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ರಮೇಶ್ ಕುಮಾರ್ ಅವರು ಮಂಗಳೂರು ಪೊಲೀಸ್ ಕಮೀಷನರ್ ಗೆ ಕರೆ ಮಾಡಿ ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನು ನೇಣು ಬಿಗಿದು ಸಾಯುತ್ತೇನೆ ಎಂದು ತಿಳಿಸಿದ್ದರು. ಕಮೀಷನರ್ ಅವರು ಅವರನ್ನು ಮನವೊಲಿಸಲು ಪ್ರಯತ್ನಿಸಿದರು ಸಾಧ್ಯವಾಗಿರಲಿಲ್ಲ. ಆ ವ್ಯಕ್ತಿಯ ಪತ್ತೆಗಾಗಿ ಪೊಲೀಸ್ ಕಮೀಷನರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಚಾರವನ್ನು ಹಂಚಿಕೊಂಡು ಆತನ ಪ್ರಾಣ ಉಳಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆಯ ಮೂಲಕವು ಆತನ ಲೊಕೆಶನ್ ಪತ್ತೆ ಹಚ್ಚಿ ಪ್ರಾಣ ವುಳಿಸಲು ಪ್ರಯತ್ನಿಸಲಾಯಿತಾದರೂ ಆತನ ಇರುವಿಕೆ ಗೊತ್ತಾಗಿ ಅಲ್ಲಿಗೆ ಹೋದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿತ್ತು.





 

ಆತ್ಮಹತ್ಯೆ ಮಾಡಿಕೊಂಡಿದ್ದ ದಂಪತಿಗಳಿಗೆ ಕೊರೊನಾ ಭಯ ಕಾಡಿತ್ತು-  ದಂಪತಿಗಳಿಗೆ ಮಕ್ಕಳಿಲ್ಲದೆ ಇದ್ದು ಇವರು ಇದರಿಂದ ನೊಂದುಕೊಂಡಿದ್ದರು. ಜೊತೆಗೆ ಅನಾರೋಗ್ಯವು ಕಾಡುತ್ತಿದ್ದು ಇತ್ತೀಚೆಗೆ ಕೊರೊನಾ ,ಬ್ಲ್ಯಾಕ್  ಫಂಗಸ್ ಬಗ್ಗೆಯು ಆತಂಕ ಹೆಚ್ಚಿತ್ತು. ಅವರಿಗೆ ಕಾಡುತ್ತಿರುವ ಸಮಸ್ಯೆ ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ ಇರಬಹುದೆಂದು ದಂಪತಿಗಳು ಕಲ್ಪಿಸಿಕೊಂಡಿದ್ದರು.  ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿದ್ದಾರೆ. ಇದಕ್ಕೂ ಮೊದಲು ಅವರು ತಮ್ಮ ಆಪ್ತರಿಗೆ ವಾಯ್ಸ್ ಸಂದೇಶವನ್ನು ಕಳುಹಿಸಿದ್ದು ಅದರಲ್ಲಿ  ತಮಗೆ ಕೊರೊನಾ ಬಂದಿದೆ.  ಅದಕ್ಕಾಗಿ ಸಾಯುತ್ತಿದ್ದೇವೆ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ.ನಮ್ಮ ಅಂತ್ಯಸಂಸ್ಕಾರಕ್ಕಾಗಿ ಒಂದು ಲಕ್ಷ ಹಣವನ್ನು ಇಟ್ಟಿದ್ದೇವೆ. ಮನೆಯಲ್ಲಿರುವ ಸಾಮಾಗ್ರಿಗಳನ್ನು ಬಡವರಿಗೆ ಹಂಚಿ ಎಂದು ಹೇಳಿಕೊಂಡಿದ್ದಾರೆ.




ಮೃತರ ಪೋಸ್ಟ್ ಮಾರ್ಟಂ ನಡೆಸಿದ ವೇಳೆಯಲ್ಲಿ ಇವರಿಗೆ ಕೊರೊನಾ ಇಲ್ಲದಿರುವುದು ಬೆಳಕಿಗೆ ಬಂದಿದೆ.  ಡೆತ್ ನೋಟ್ ನಲ್ಲಿ ಮತ್ತು ವಾಯ್ಸ್ ಮೆಸೆಜ್ ನಲ್ಲಿ ತಿಳಿಸಿದಂತೆ  ಅವರ ಅಂತ್ಯಸಂಸ್ಕಾರವನ್ನು ಮಂಗಳೂರಿನ ನಂದಿಗುಡ್ಡೆಯಲ್ಲಿ ಹಿಂದೂ ಸಂಘಟನೆಗಳು ಹಿಂದೂ ಸಂಪ್ರದಾಯದಂತೆ ನಡೆಸಿದೆ.



ಒಟ್ಟಿನಲ್ಲಿ ಕೊರೊನಾ ಇಲ್ಲದಿದ್ದರೂ ತಮಗೆ ಕೊರೊನಾ ಬಂದಿದೆ ಎಂದು ಕಲ್ಪಿಸಿಕೊಂಡು ಈ ದಂಪತಿಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.  ಮುಂಜಾನೆ ನಡೆದ ಈ ಘಟನೆ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.  ಕೊರೊನಾ ಬಗೆಗಿನ  ಸುದ್ದಿಗಳಿಂದ ಡಿಪ್ರೆಸನ್ ಗೆ ಒಳಗಾಗಿ ಈ ದಂಪತಿಗಳು ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99