MANGALORE- ಪೊಲೀಸ್ ಕಮೀಷನರ್ ಗೆ ಕರೆ ಮಾಡಿ ಆತ್ಮಹತ್ಯೆ ಮಾಡಿದ ದಂಪತಿ- ಕೈಗೂಡದ ಬದುಕುಳಿಸುವ ಪ್ರಯತ್ನ
ಮಂಗಳೂರು: ಮಂಗಳೂರು ನಗರದ ಸುರತ್ಕಲ್ ನ ಚಿತ್ರಾಪುರದಲ್ಲಿ ಕೊರೊನಾ ಸೋಂಕಿತ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ
ನಡೆದಿದೆ. ರಮೇಶ್ ಕುಮಾರ್ ಮತ್ತು ಗುಣ ಎಂಬ ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಗೆ ಮುನ್ನ
ಪೊಲೀಸ್ ಕಮೀಷನರ್ ಗೆ ಕರೆ ಮಾಡಿದ್ದ ರಮೇಶ್ ಕುಮಾರ್
ರಮೇಶ್ ಕುಮಾರ್ ಆತ್ಮಹತ್ಯೆಗೆ ಮುನ್ನ ಮಂಗಳೂರು ನಗರ ಪೊಲೀಸ್ ಕಮೀಷನರ್
ಗೆ ಕರೆ ಮಾಡಿ ನನ್ನ ಹೆಂಡತಿ ಈಗಾಗಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ನಾನು ಆತ್ಮಹತ್ಯೆ ಮಾಡುತ್ತಿದ್ದೇನೆ.
ನಮ್ಮ ಅಂತ್ಯಸಂಸ್ಕಾರ ನಡೆಸಿ ಎಂದು ಕರೆ ಮಾಡಿದ್ದಾರೆ.
ಇದರ ಬೆನ್ನಿಗೆ ಮಂಗಳೂರು ಪೊಲೀಸ್ ಕಮೀಷನರ್ ಅವರನ್ನು ಬದುಕುಳಿಸುವ ಪ್ರಯತ್ನಕ್ಕೆ ಕೈಹಾಕಿದ್ದು
ಸತತ ಪ್ರಯತ್ನಗಳನ್ನು ಮಾಡಿದ್ದಾರೆ. ಕೊನೆಗೆ ಆತನ
ಇರುವಿಕೆ ಗೊತ್ತಾಗಿ ಪೊಲೀಸರು ಅಲ್ಲಿಗೆ ತೆರಳಿದಾಗ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು
ಕಂಡಿದೆ.
ಆತ್ಮಹತ್ಯೆಗೆ ಮುನ್ನ
ರಮೇಶ್ ಕುಮಾರ್ ಹಲವರಿಗೆ ವಾಯ್ಸ್ ಮೆಸೆಜ್ ಸಂದೇಶ ಕಳುಹಿಸಿದ್ದು ಅದರಲ್ಲಿ ನಮಗೆ ಕೊರೊನಾ ಬಂದಿರುವುದರಿಂದ ಬದುಕುವ ಪರಿಸ್ಥಿತಿಯಲ್ಲಿ
ಇಲ್ಲ. ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ.
ತಂದೆ ತಾಯಿಯನ್ನು ಚೆನ್ನಾಗಿ ನೋಡಿ. ನಮ್ಮ ಅಂತ್ಯಸಂಸ್ಕಾರಕ್ಕಾಗಿ ಒಂದು ಲಕ್ಷ ಹಣವನ್ನು ಇಟ್ಟಿದ್ದೇವೆ.
ಅದನ್ನು ಬಳಸಿಕೊಳ್ಳಿ. ಮನೆಯಲ್ಲಿನ ಸಾಮಾಗ್ರಿಗಳನ್ನು ಬಡವರಿಗೆ ಹಂಚಿ ಎಂದು ಹೇಳಿದ್ದಾರೆ. ಇದೇ ವೇಳೆ
ಅವರ ಪತ್ನಿ ಬರೆದಿರುವ ಡೆತ್ ನೋಟ್ ಲಭ್ಯವಾಗಿದೆ.