-->

ಮಂಗಳೂರು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆರ್ ಟಿಪಿಸಿಆರ್ ತಪಾಸಣೆಗೆ ಸಿದ್ಧತೆ: ಶೀಘ್ರ ಯುಎಇಗೆ ವಿಮಾನ ಯಾನ ಆರಂಭ

ಮಂಗಳೂರು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆರ್ ಟಿಪಿಸಿಆರ್ ತಪಾಸಣೆಗೆ ಸಿದ್ಧತೆ: ಶೀಘ್ರ ಯುಎಇಗೆ ವಿಮಾನ ಯಾನ ಆರಂಭ

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‌ ಇನ್ನೂ ರ್ಯಾಪಿಡ್ ಆರ್ ಟಿಪಿಸಿಆರ್ ತಪಾಸಣಾ ಉಪಕರಣಗಳ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದ್ದು,  ಆಗಸ್ಟ್ 20ರ ಒಳಗೆ ಯುಎಇಗೆ ವಿಮಾನ ಯಾನ ಸೌಲಭ್ಯ ಕಲ್ಪಿಸುವುದಾಗಿ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಕೋವಿಡ್ ಸೋಂಕಿನ ಭೀತಿಯಿಂದ ಭಾರತದಿಂದ ಯುಎಇಗೆ ತೆರಳುವ ವಿಮಾನಗಳಿಗೆ ನಿಷೇಧ ಹೇರಲಾಗಿತ್ತು. ಆ.5ರಂದು ಯುಎಇ ಸರಕಾರವು ಈ ನಿಷೇಧವನ್ನು  ತೆರವುಗೊಳಿಸಿ ಷರತ್ತುಬದ್ಧ ನಿಯಮಗಳೊಂದಿಗೆ ಪ್ರಯಾಣಿಸಲು ಅನುಮತಿ ನೀಡಿತ್ತು. ಈ ಮೂಲಕ ಯುಎಇ ರೆಸಿಡೆನ್ಸ್ ವೀಸಾ ಹೊಂದಿರಬೇಕು, ಎರಡೂ ಲಸಿಕೆ ಪಡೆದಿರಬೇಕು, 48 ಗಂಟೆಗಳ ಒಳಗಿನ ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು. ಅಲ್ಲದೆ ವಿಮಾನದಲ್ಲಿ ಹೊರಡುವ ಮುನ್ನ ನಿಲ್ದಾಣದಲ್ಲಿಯೇ ರ್ಯಾಪಿಡ್ ಆರ್ ಟಿಪಿಸಿಆರ್ ತಪಾಸಣೆ ನಡೆಸಬೇಕು. ಅದರಲ್ಲಿ ನೆಗೆಟಿವ್ ವರದಿ ಬಂದಲ್ಲಿ ಮಾತ್ರ ಯುಎಇ ರಾಷ್ಟ್ರಕ್ಕೆ ಆಗಮಿಸಲು ಅಲ್ಲಿನ ಸರಕಾರ ಅನುಮತಿ ನೀಡಿತ್ತು.

ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆರ್ ಟಿಪಿಸಿಆರ್ ತಪಾಸಣೆ ವ್ಯವಸ್ಥೆ ಇರದ ಕಾರಣ ವಿಮಾನ ಯಾನ ಇನ್ನೂ ಆಭವಾಗಿರಲಿಲ್ಲ. ಪರಿಣಾಮ ಸಾವಿರಾರು ಮಂದಿ ಅನಿವಾಸಿ ಭಾರತೀಯರು ಯುಎಇಗೆ ಹೋಗಲು‌ ಬೆಂಗಳೂರು, ಮುಂಬೈ ವಿಮಾನ ನಿಲ್ದಾಣವನ್ನು ಆಶ್ರಯಿಸಬೇಕಿತ್ತು. ಅನಿವಾಸಿ ಭಾರತೀಯರು ಈ ವಿಚಾರವನ್ನು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಗಮನಕ್ಕೆ ತಂದಿದ್ದರು. ಅವರು ಶೀಘ್ರದಲ್ಲಿ ಈ ತೊಡಕನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದರು‌. ಇದೀಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆರ್ ಟಿಪಿಸಿಆರ್ ತಪಾಸಣೆ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಶೀಘ್ರದಲ್ಲೇ ಯುಎಇಗೆ ವಿಮಾನ ಯಾನ ಆರಂಭವಾಗಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99