ಸಹೋದರಿಯರಿಬ್ಬರ ಮೇಲೆ ಲ್ಯಾಬ್ ಟೆಕ್ನೀಷನ್ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ!
Tuesday, August 17, 2021
ಹೈದರಾಬಾದ್: ಆಸ್ಪತ್ರೆಯೊಂದರ ಲ್ಯಾಬ್ ಟೆಕ್ನಿಷನ್ ತನ್ನ ಸಹಚರರೊಂದಿಗೆ ಸೇರಿ ಸಹೋದರಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಬಗ್ಗೆ ಅತ್ಯಾಚಾರ ಸಂತ್ರಸೆಯೋರ್ವರು ಪೊಲೀಸ್ ದೂರು ದಾಖಲಿಸಿದ್ದಾರೆ.
ತನ್ನ ಸಹೋದರಿ ಮತ್ತು ಸಂಬಂಧಿಕನೊಂದಿಗೆ ಸಂತ್ರಸ್ತ ಮಹಿಳೆಯು ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ ಆರೋಪಿ ಉಮಾ ಮಹೇಶ್ವರ್ ಎಂಬ ಲ್ಯಾಬ್ ಟೆಕ್ನಿಷಿಯನ್ ತನ್ನನ್ನು ಕೋಣೆಗೆ ಕರೆದೊಯ್ದು, ಮಾದಕ ದ್ರವ್ಯ ನೀಡಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಸುಮಾರು ನಾಲ್ಕು ದಿನಗಳ ಕಾಲ ಕೋಣೆಯಲ್ಲಿ ಬಂಧಿಸಿ, ಆರೋಪಿ ಸೇರಿದಂತೆ ಆತನ ಸ್ನೇಹಿತರು ಕೂಡ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿ ತನ್ನ ಅಕ್ಕನ ಮೇಲೂ ಅತ್ಯಾಚಾರ ಎಸಗಿದ್ದು, ಆಕೆ ಇನ್ನೂ ಪತ್ತೆಯಾಗಿಲ್ಲ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಉಮಾ ಮಹೇಶ್ವರ್ ಮತ್ತು ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಚಿಲ್ಕಲಗೂಡ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ. ನರೇಶ್ ಮಾಹಿತಿ ನೀಡಿದ್ದಾರೆ.