
ವಿವಾಹಿತನೊಂದಿಗೆ ಯುವತಿಯ ಪ್ರೀತಿ-ಪ್ರಣಯ: ಮನೆಬಿಟ್ಟು ಹೋದವಳು 3ದಿನದ ಬಳಿಕ ಪ್ರಿಯಕರನೊಂದಿಗೆ ಶವವಾಗಿ ಪತ್ತೆಯಾದಳು
Tuesday, August 17, 2021
ಚಿತ್ರದುರ್ಗ: ವಿವಾಹಿತನೋರ್ವ ತನ್ನ ಪ್ರೇಯಸಿಗೆ ವಿಷಕೊಟ್ಟ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೃತರನ್ನು ಚಳ್ಳಕೆರೆ ತಾಲೂಕು ಪರಶುರಾಮಪುರ ಗ್ರಾಮದ ತಿಪ್ಪೇಸ್ವಾಮಿ (32), ಹಿರಿಯೂರು ತಾಲೂಕಿನ ಉಡುವಳ್ಳಿ ನಿವಾಸಿ ಪುಷ್ಪಲತಾ (21) ಎಂದು ಗುರುತಿಸಲಾಗಿದೆ.
ಮೃತ ಪುಷ್ಪಲತಾ ವಿವಾಹಿತ ತಿಪ್ಪೇಸ್ವಾಮಿಯನ್ನು ಪ್ರೀತಿಸುತ್ತಿದ್ದಳು. ತಿಪ್ಪೇಸ್ವಾಮಿ ಜತೆ ಮದುವೆ ಮಾಡುವಂತೆ ಮನೆಯಲ್ಲಿ ಪಟ್ಟು ಹಿಡಿದಿದ್ದಳು. ಆದರೆ ವಿವಾಹಿತನ ಜತೆ ಮದುವೆ ಮಾಡಲು ಪಾಲಕರು ನಿರಾಕರಿಸಿದ್ದರು. ಈ ನಡುವೆ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಯುವತಿ ಇದೀಗ ಪ್ರಿಯಕರನ ಜತೆ ಶವವಾಗಿ ಪತ್ತೆಯಾಗಿದ್ದಾಳೆ. ಈ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.