MANGALORE-ಮದುವೆಯಾದ ವರುಷದಲ್ಲಿ ಪತ್ನಿಯನ್ನು ಹತ್ಯೆ ಮಾಡಿದ…. ಕೊಲೆ ಮಾಡಿದ ಬಳಿಕ ಮೆಟ್ಟಿಲಿಂದ ಬಿದ್ದಳೆಂದು ಕಥೆ ಕಟ್ಟಿದ (VIDEO)
ಮಂಗಳೂರು: ಮದುವೆಯಾದ ಒಂದೂವರೆ ವರುಷದಲ್ಲಿ ಪತ್ನಿಯನ್ನು ಹಾರೆಯಿಂದ ಕೊಂದ ಪತಿ ಆಕೆ ಮೆಟ್ಟಿಲಿನಿಂದ
ಬಿದ್ದು ಗಾಯಗೊಂಡಿದ್ದಾಳೆ ಎಂದು ಕಥೆ ಕಟ್ಟಿ ಇದೀಗ ಜೈಲುಪಾಲಾಗಿದ್ದಾನೆ.
ಮೂಡಬಿದ್ರೆಯ ಧರೆಗುಡ್ಡೆಯ ದಿನರಾಜ್ ಎಂಬಾತ ಈ ಕೊಲೆ ಮಾಡಿದಾತ. ಈತ ತನ್ನ ಪತ್ನಿ ಸುನಿತಾ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾಳೆ ಎಂದು ಮೂಡಬಿದ್ರೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಗಂಭೀರ ಗಾಯಗೊಂಡಿದ್ದ ಆಕೆಗೆ ಪ್ರಥಮ ಚಿಕಿತ್ಸೆ ನೀಡಿದ ಮೂಡಬಿದ್ರೆ ಆಸ್ಪತ್ರೆಯವರು ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದರು. ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋದ ವೇಳೆ ಆಕೆ ಸಾವನ್ನಪ್ಪಿದ್ದು ಆಕೆಯ ಮೃತದೇಹವನ್ನು ಮಂಗಳೂರಿನ ವೆನ್ಲಾ ಕ್ ಆಸ್ಪತ್ರೆಗೆ ಶವಾಗಾರಕ್ಕೆ ಕೊಂಡೊಯ್ಯಲಾಯಿತು.
ಈಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಪತಿಯನ್ನು ವಶಕ್ಕೆ
ಪಡೆದು ವಿಚಾರಣೆ ನಡೆಸಿದ ಪೊಲೀಸರು ಪತಿಯೆ ಕೊಲೆಗಾರ ಎಂಬುದನನ್ನು ತನಿಖೆಯಿಂದ ಪತ್ತೆ ಹಚ್ಚಿದ್ದಾರೆ.
ಈತ ಹಾರೆಯಿಂದ ಆಕೆಗೆ ಹೊಡೆದಿದ್ದು ಆಕೆ ಗಂಭೀರವಾಗಿ
ಗಾಯಗೊಂಡ ಬಳಿಕ ಆಕೆಯನ್ನು ಆಸ್ಪತ್ರೆಗೆ ಕೊಂಡೋಗಿ ಮೆಟ್ಟಿಲಿನಿಂದ ಜಾರಿ ಬಿದ್ದಳು ಎಂದು ಕಥೆ ಕಟ್ಟಿದ್ದ.
ಮದುವೆಯಾಗಿ ಒಂದೂವರೆ ವರ್ಷವಾಗಿರುವ ಇವರ ನಡುವೆ ಮನಸ್ತಾಪಗಳಿದ್ದು ಕಿರಿಕಿರಿ ಗಳು ನಡೆಯುತ್ತಿದ್ದವು
ಎಂಬುದು ಪೊಲೀಸರಿಗೆ ತಿಳಿದು ಬಂದಿದೆ.
ಮದುವೆಯಾಗಿ ಒಂದೂವರೆ ವರ್ಷವಾಗಿರುವುದರಿಂದ ಈತ ವರದಕ್ಷಿಣೆಗಾಗಿ ಕಿರುಕುಳ
ನೀಡುತ್ತಿದ್ದನ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್
ಶಶಿಕುಮಾರ್ ಅವರು ವೆನ್ಲಾಕ್ ಶವಗಾರಕ್ಕೆ ಭೇಟಿ ನೀಡಿ
ಪರಿಶೀಲನೆ ನಡೆಸಿದರು.