ಪ್ರವಾಸಕ್ಕೆ ಬರುವ ಹುಡುಗಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯ ಬಂಧನ..!!
Wednesday, August 18, 2021
ಜೈಪುರ: ರಾಜಸ್ಥಾನದ ಜೈಪುರಕ್ಕೆ ಪ್ರವಾಸಕ್ಕೆ ಬರುವ ಹುಡುಗಿಯರ ಅವರ ಅಶ್ಲೀಲ ಚಿತ್ರಗಳನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಕರ್ ಜಿಲ್ಲೆಯ ನಿವಾಸಿಯಾಗಿರುವ ಸುರೇಶ್ ಕುಮಾರ್ ಯಾದವ್ ಎಂಬ 34 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಈತ ಗಿಡ್ಡ ಡ್ರೆಸ್ ಹಾಕಿಕೊಂಡು ಪ್ರವಾಸಕ್ಕೆ ಬರುತ್ತಿದ್ದ ಯುವತಿಯರ ವಿಡಿಯೋಗಳನ್ನು ತೆಗೆಯುತ್ತಿದ್ದ ನಂತರ ಆ ವಿಡಿಯೋಗಳನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ.
ಪ್ರವಾಸಕ್ಕೆ ಬರುವ ಯುವತಿಯರ ಪಕ್ಕದಲ್ಲಿ ಕುಳೀತುಕೊಳ್ಳುತ್ತಿದ್ದ ಸುರೇಶ್ ಆ ಪ್ರವಾಸಿಗರ ಶೂ ಲೇಸ್ ಕಟ್ಟುವ ನೆಪದಲ್ಲಿ ಅಥವಾ ಏನಾದರೂ ಹೆಕ್ಕುವ ನೆಪದಲ್ಲಿ ಕೆಳಗೆ ಬಗ್ಗಿ ಮೊಬೈಲ್ನಿಂದ ಆ ಯುವತಿಯ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ. ಅಂಬರ್ ಕೋಟೆಗೆ ಮಾಮೂಲಿ ಸೀರೆಯುಟ್ಟು ಹೋಗಿದ್ದ ಮಹಿಳಾ ಪೊಲೀಸ್ ಸುರೇಶ್ನ ಮೊಬೈಲ್ ಚೆಕ್ ಮಾಡಿದ್ದಳು. ಆಗ ಆತನ ಮೊಬೈಲ್ನಲ್ಲಿ 200ಕ್ಕೂ ಹೆಚ್ಚು ವಿಡಿಯೋಗಳಿರುವುದು ಪತ್ತೆಯಾಗಿದೆ. ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸಲೆಂದೇ ತಾನು 3 ತಿಂಗಳಿನಿಂದ ಆಗಾಗ ಜೈಪುರಕ್ಕೆ ಬರುತ್ತಿದ್ದುದಾಗಿ ಆತ ಹೇಳಿಕೊಂಡಿದ್ದಾನೆ.