
ನಟಿಯರು ಎದುರಿಸುವ ಸಮಸ್ಯೆ ಬಿಚ್ಚಿಟ್ಟ ಗಾಯಕಿ ಚಿನ್ಮಯಿ..
Friday, August 6, 2021
ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಆಗಿರುವ ಚಿನ್ಮಯಿ ಶ್ರೀಪಾದ ಸಾವಿರಾರು ಮಹಿಳೆಯರು ಳ, ನಟಿಯರು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ತ್ರೀವಾದಿ ಎಂದೇ ಕರೆಯಲ್ಪಡುವ ಒಂದು ಚಿನ್ಮಯಿ ವಿರುದ್ಧ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳು ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಮುಕ್ತವಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿನ್ಮಯಿ ಅವರು ಈ ಹಿಂದೆ ಗಾಯಕ ರಘು ದೀಕ್ಷಿತ್ ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿ ಆಗಿದ್ದರು. ಅನ್ಯಾಯ, ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣಗಳ ವರದಿ ಆದಾಗಲೆಲ್ಲ ಚಿನ್ಮಯಿ ಜಾಲತಾಣದಲ್ಲಿ ತಮ್ಮ ಧ್ವನಿಗೂಡಿಸುತ್ತಾರೆ.
ಸಾವಿರಾರು ನಟಿಯರು ಕೂಡ ದಿನನಿತ್ಯ ಈ ತರಹದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮರ್ಮಾಂಗ ಮತ್ತು ಹಸ್ತಮೈಥುನದ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸುತ್ತಾರೆ. ಯಾಕೆ ಈ ರೀತಿ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಅವುಗಳನ್ನು ನೋಡಿ ಯಾರೊಬ್ಬರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇವರುಗಳ ಮಧ್ಯೆ ಕೆಲವರು ಒಳ್ಳೆಯ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆಂದು ಹೇಳಿದ್ದಾರೆ.