ಪ್ರೀತಿಸಿ ಮದುವೆಯಾದ ಈ ಜೋಡಿಗೆ ಯಾರ ದೃಷ್ಟಿ ಬಿತ್ತೊ ಏನು..?? ದುರಂತ ಅಂತ್ಯ ಕಂಡ ಯುವತಿ...
Friday, August 6, 2021
ಹಾಸನ: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಜೋಡಿ ದುರಂತ ಅಂತ್ಯ ಕಂಡಿದ್ದು ಯುವತಿ ಸಾವನ್ನಪ್ಪಿದ್ದಾಳೆ.
ಚನ್ನರಾಯಪಟ್ಟಣದ ಬೆಕ್ಕ ಗ್ರಾಮದ ಪೂಜಾ(20) ಮೃತ ದುರ್ದೈವಿ. ಸಕಲೇಶಪುರದ ಅಶ್ವಥ್ ಮತ್ತು ಪೂಜಾ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ಪೋಷಕರು ಇವರ ಪ್ರೀತಿಯನು ವಿರೋಧಿಸಿ ಪೂಜಾಳಿಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ನಡೆಸಿದ್ದರು.
ಇದಾದ ಬಳಿಕ ವಿರೋಧದ ನಡುವೆಯೂ ಪೂಜಾ, ತನ್ನ ಪ್ರಿಯಕರ ಅಶ್ವಥ್ ಜತೆ ಮದುವೆ ಆಗಿದ್ದಳು. ದಂಪತಿ ಇಬ್ಬರೂ ಸಕಲೇಶಪುರ ಪಟ್ಟಣದಲ್ಲಿ ವಾಸವಿದ್ದರು. ಆದರೆ ಗುರುವಾರದಂದು ಸಕಲೇಶಪುರದಲ್ಲಿ ಹೇಮಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಪೂಜಾ ಪ್ರಾಣ ಬಿಟ್ಟಿದ್ದಾಳೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೂಜಾಳ ಪಾಲಕರು, ನನ್ನ ಮಗಳಿಗೆ ಗಂಡನ ಮನೆಯಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು. ಆಕೆಯ ಗಂಡನ ಮನೆಯವರ ಕಿರುಕುಳ ಸಹಿಸಲಾಗದೆ ಮಗಳು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.