-->

ನಟಿ ಶಿಲ್ಪ ಶೆಟ್ಟಿ ಹಾಗೂ ಅವರ ತಾಯಿ ವಿರುದ್ಧ ಚೀಟಿಂಗ್ ಕೇಸ್ ದಾಖಲು..!!

ನಟಿ ಶಿಲ್ಪ ಶೆಟ್ಟಿ ಹಾಗೂ ಅವರ ತಾಯಿ ವಿರುದ್ಧ ಚೀಟಿಂಗ್ ಕೇಸ್ ದಾಖಲು..!!


ಲಖನೌ(ಉತ್ತರ ಪ್ರದೇಶ): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ವಿರುದ್ಧ ಪ್ರಕರಣವೊಂದು ದಾಖಲಾಗಿದೆ. ಒಂದು ವೇಳೆ ಇವರಿಬ್ಬರ ಮೇಲೆ ಮೇಲೆ ಮಾಡಿರುವ ಆರೋಪ ಸಾಬೀತಾದರೆ ಇಬ್ಬರನ್ನು ಬಂಧನ ಮಾಡುವ ಸಾಧ್ಯತೆ ಇದೆ.

ಶಿಲ್ಪಾ ಶೆಟ್ಟಿ ವಿವಿಧ ರಾಜ್ಯಗಳಲ್ಲಿ ಫಿಟ್ನೆಸ್​​ ಕೇಂದ್ರ ನಡೆಸುತ್ತಿದ್ದು, ಅದರ ಮುಖ್ಯಸ್ಥೆಯಾಗಿ ಶಿಲ್ಪಾ ಹಾಗೂ ನಿರ್ದೇಶಕಿಯಾಗಿ ತಾಯಿ ಸುನಂದಾ ಇದ್ದಾರೆ. ಸದ್ಯ ಮತ್ತೊಂದು ಶಾಖೆ ಆರಂಭ ಮಾಡುವುದಾಗಿ ನಂಬಿಸಿ ಇಬ್ಬರು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಕೂಡ ಫಿಟ್ನೆಸ್​ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ತಮಗೆ ಮೋಸ ಮಾಡಿದ್ದಾರೆಂದು ಇಬ್ಬರು ಇದೀಗ ದೂರು ದಾಖಲು ಮಾಡಿದ್ದಾರೆ.ಜೋಸ್ನಾ ಚೌಹಾಣ್​ ಮತ್ತು ರೋಹಿತ್​ ವೀರ್​ ಸಿಂಗ್​​ ದೂರು ದಾಖಲು ಮಾಡಿದ್ದಾರೆ. 

ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ಚೀಟಿಂಗ್​ ಪ್ರಕರಣ ದಾಖಲಾಗಿದೆ. ಉತ್ತರಪ್ರದೇಶದ ಲಖನೌ ಪೊಲೀಸರು ಮುಂಬೈಗೆ ವಿಚಾರಣೆಗಾಗಿ ಆಗಮಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಲಖೌನ್​ನ ಹಜರತ್​​ಗಂಜ್​​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99