ನವ ಜೋಡಿಯ ಫೋಟೋಶೂಟ್ ಮಾಡಲು ಹೋದ ಫೋಟೋಗ್ರಾಫರ್ ಗೆ ಆಗಿದ್ದೇನು ಗೊತ್ತಾ...?
Monday, August 9, 2021
ಗುರುಗ್ರಾಮ (ಪಂಜಾಬ್): ಇಲ್ಲೊಂದು ಜೋಡಿ ಮದುವೆಯಾಗುತ್ತಿದ್ದು.. ಈ ಜೋಡಿಯ ಫೋಟೋಶೂಟ್ ಮಾಡಲೆಂದು ಫೋಟೋಗ್ರಾಫರ್ ನವಜೋಡಿಯನ್ನು ಸ್ವಿಮ್ಮಿಂಗ್ ಪೂಲ್ ಬಳಿ ಕರೆದುಕೊಂಡು
ಹೋಗಿದ್ದಾನೆ.
ವರ ಮತ್ತು ವಧು ಮದುವೆಯ ಮಂಟಪದಿಂದ ಹೊರ ನಡೆದುಕೊಂಡು ಬರುತ್ತಿದ್ದಂತೆಯೇ ಅದರ ವಿಡಿಯೋ ಮಾಡಲು ಫೋಟೋಗ್ರಾಫರ್ ಮುಂದಾಗಿದ್ದಾನೆ. ಅಕ್ಕಪಕ್ಕ ನಿಂತಿರುವವರೆಲ್ಲಾ ಅವರ ಮೇಲೆ ಹೂವಿನ ದಳಗಳನ್ನು ಎಸೆದು ಶುಭಕೋರುತ್ತಿದ್ದಾರೆ.ಅಂಥ ಸಂದರ್ಭದಲ್ಲಿ ಫೋಟೋಗ್ರಾಫರ್ ತಾನೆಲ್ಲಿ ನಿಂತಿದ್ದೇನೆ ಎನ್ನುವ ಅರಿವು ಇಲ್ಲದೇ ಕೊಳದೊಳಕ್ಕೆ ಜಾರಿಬಿಟ್ಟಿದ್ದಾನೆ.
ಅದೃಷ್ಟವಶಾತ್ ಅವನನ್ನು ಯಾರೋ ಎತ್ತಿ ಹಿಡಿದು ಹೊರಕ್ಕೆ ತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗಿದೆ.