
ತಾಳಿಕಟ್ಟುವ ಕೊನೆಕ್ಷಣದಲ್ಲಿ ಮದುವೆಗೆ Noo ಎಂದ ವಧು..ಕಾರಣವೇನು ಗೊತ್ತಾ..??
Monday, August 9, 2021
ವರ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ಮೀರತ್ ನಲ್ಲಿ ನಡೆದಿದೆ.
ವಧು ಮದುವೆ ಬೇಡ ಎನ್ನಲು ಕಾರಣವೇನು ಗೊತ್ತಾ..?
ಮೀರತ್ ನ ರತ್ನ 22 ವರ್ಷದ ವಧುವಿಗೆ ಪಕ್ಕದ ಊರಿಿಿನ ಹುಡುಗನೊಂದಿಗೆ ಮದುವೆೆೆ ಪಿಕ್ಸ್ ಆಗಿಿಿತ್ತು.
ಮದುವೆಯ ಖುಷಿಗಾಗಿ ಹುಡುಗ ಮತ್ತು ಹುಡುಗಿಯ ಕಡೆಯವರೆಲ್ಲರೂ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ವರನ ಕಡೆಯವರು ಮದುವೆ ಹಾಲ್ ಬಳಿ ಗಾಳಿಯಲ್ಲಿ ಗುಂಡು ಹಾರಿಸಿ ಎಂಜಾಯ್ ಮಾಡುತ್ತಿದ್ದಾಗ ವಧುವಿನ ಚಿಕ್ಕಪ್ಪನಿಗೆ ಗಾಯವಾಗಿತ್ತು. ಬಳಿಕ ಇದೇ ವಿಷಯಕ್ಕೆ ವಧುವಿನ ಚಿಕ್ಕಪ್ಪ ಹಾಗೂ ವರನ ಮನೆಯವರ ನಡುವೆ ಜಗಳ ನಡೆದಿತ್ತು. ಇದರಿಂದ ಬೇಸರಗೊಂಡಿದ್ದ ವಧು ಕೊನೆ ಕ್ಷಣದಲ್ಲಿ ಈ ಮದುವೆಯೇ ಬೇಡ ಎಂದು ನಿರ್ಧಾರ ಮಾಡಿದ್ದಾಳೆ.
ನನ್ನ ಕಣ್ಣೆದುರಲ್ಲೇ ನನ್ನ ಮನೆಯವರ ಜೊತೆ ಈ ರೀತಿ ಗಲಾಟೆ ಮಾಡುವ ಹುಡುಗನ ಮನೆಯವರು ನಾನು ಅವರ ಮನೆಯಲ್ಲಿ ಒಂಟಿಯಾಗಿದ್ದಾಗ ನನ್ನ ಜೊತೆ ಯಾವ ರೀತಿ ವರ್ತಿಸಬಹುದು ಎಂದು ನನಗೆ ಭಯವಾಗುತ್ತಿದೆ. ಹಾಗಾಗಿ, ಮುಂದಾಗುವ ಅಪಾಯಕ್ಕಿಂತಲೂ ಈಗಲೇ ಮದುವೆ ನಿಲ್ಲಿಸುವುದು ಒಳ್ಳೆಯದು ಎಂದು ಆಕೆ ಖಡಾಖಂಡಿತವಾಗಿ ಈ ಮದುವೆ ಬೇಡವೇ ಬೇಡ ಎಂದು ಹೇಳಿದ್ದಾಳೆ.