
ಪ್ರಿಯಕರನ ಜೊತೆ ಏಕಾಂತದಲ್ಲಿರುವಾಗ ಗಂಡನ ಎಂಟ್ರಿ..! ಹೈಕೋರ್ಟ್ ಮೊರೆ ಹೋದ ಮಹಿಳೆ..
Monday, August 9, 2021
ಪ್ರಯಾಗರಾಜ (ಉತ್ತರಪ್ರದೇಶ): ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದ ಮಹಿಳೆ ಹೈಕೋರ್ಟ್ನ ಮೊರೆ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತನ್ನ ಗಂಡ ಹೊಡೆಯುತ್ತಿದ್ದ ಎನ್ನುವ ಕಾರಣಕ್ಕೆ ಆತನನ್ನು ಬಿಟ್ಟು ಪ್ರಿಯಕರನ ಜೊತೆ ವಾಸವಿದ್ದಳು ಆದರೆ ತನ್ನ ಗಂಡನಿಗೂ ಬಂದ ನಮಗೆ ತೊಂದರೆ ನೀಡುತ್ತಿದ್ದಾರೆ ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಪೊಲೀಸರಿಗೆ ಆದೇಶಿಸಿದೆ ಹೈಕೋರ್ಟ್ ಮೊರೆ ಹೋಗಿದ್ದಳು.
ಇದನ್ನು ಆಲಿಸಿದ ನ್ಯಾಯಮೂರ್ತಿಗಳು ವಿಚ್ಛೇದನ ನೀಡದೆ ಗಂಡನಿಂದ ಬೇರ್ಪಟ್ಟು ಬೇರೆಯವರ ಜೊತೆ ಸಂಬಂಧ ಇದ್ದರೆ ಅದು ಅಕ್ರಮ ಸಂಬಂಧ ಎನಿಸಿಕೊಳ್ಳುತ್ತದೆ ಎಂದಿದ್ದಾರೆ. ಹಾಗಾಗಿ ಹೈಕೋರ್ಟ್ ಮಹಿಳೆಯ ಮನವಿಯನ್ನು ತಿರಸ್ಕರಿಸಿದೆ. ಅಷ್ಟೇ ಅಲ್ಲದೆ ಈ ರೀತಿಯ ದೂರು ನೀಡಿ ಕೋರ್ಟಿನ ಸಮಯವನ್ನು ಹಾಳು ಮಾಡಿದ್ದಕ್ಕೆ ಐದು ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.