ಮೈಕ್ರೋಮ್ಯಾಕ್ಸ್ ಇನ್ 2ಬಿ ಸ್ಮಾರ್ಟ್‌ಫೋನ್ ಕೇವಲ 549 ರೂ. ಗೆ ಖರೀದಿಗೆ ದೊರೆಯಲಿದೆ
Sunday, August 8, 2021
ಮುಂಬಯಿ: ದೇಶೀಯ ಬ್ರ್ಯಾಂಡ್ ಆಗಿರುವ ಮೈಕ್ರೋಮ್ಯಾಕ್ಸ್ ಸಂಸ್ಥೆಯು ಮೈಕ್ರೋಮ್ಯಾಕ್ಸ್ ಇನ್ 2ಬಿ ಸ್ಮಾರ್ಟ್‌ಫೋನ್ ಅನ್ನು ವಾರದ ಬಿಂದೆ ಲಾಂಚ್ ಮಾಡಿತ್ತು. ಈ ಫೋನ್ ಈಗ ಭಾರತದಲ್ಲಿ ಖರೀದಿಗೆ ಲಭ್ಯವಿದ್ದು, ಬಂಪರ್ ಆಫರ್ನೊಂದಿಗೆ ಇದನ್ನು ನಿಮ್ಮದಾಗಿಸುವ ಅವಕಾಶವಿದೆ.
ಈ ಫೋನ್ ಮೈಕ್ರೋಮ್ಯಾಕ್ಸ್ ಇನ್ 1ಬಿ ಯ ಮುಂದಿನ ಆವೃತ್ತಿಯಾಗಿದೆ. ಹೊಸ ಇನ್ 2 ಬಿ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯ ಫೋನ್ ಆಗಿದ್ದು ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟ ಆಗುತ್ತಿದ್ದು, 4ಜಿಬಿ ರ್ಯಾಮ್ ಮತ್ತು 64 ಜಿಬಿ ಮೆಮರಿ ಇರಲಿದೆ. 10,499 ರೂ. ಬೆಲೆಯ ಮೊಬೈಲ್ ಅನ್ನು ಆಫರ್ನಲ್ಲಿ 7,999 ರೂ. ಗೆ ಖರೀದಿಸಬಹುದು. 6ಜಿಬಿ ರ್ಯಾಮ್ ಮತ್ತು 64ಜಿಬಿ ಸ್ಟೋರೇಜ್ ಮಾದರಿಗೆ 11,999 ರೂ. ಇದ್ದು ಆಫರ್ನಲ್ಲಿ ಕೇವಲ 8,999 ರೂ. ಗೆ ಲಭ್ಯವಾಗುತ್ತಿದೆ.
ಅಷ್ಟೇ ಅಲ್ಲದೆ ವಿಶೇಷವಾಗಿ ಈ ಫೋನಿನ ಮೇಲೆ 8,450 ರೂ. ವರೆಗೆ ಎಕ್ಸ್ಚೇಂಜ್ ಆಫರ್ ನೀಡಲಾಗಿದೆ. ಅಷ್ಟೂ ಮೊತ್ತಕ್ಕೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಸೇಲ್ ಆದಲ್ಲಿ ಕಡಿಮೆ ಎಆರ್ ಎಂ ಆಯ್ಕೆ ಹೊಸ ಮೈಕ್ರೋಮ್ಯಾಕ್ಸ್ ಇನ್ 2ಬಿ ಕೇವಲ 549 ರೂ. ಗೆ ಖರೀದಿಸಬಹುದಾಗಿದೆ. ಮೈಕ್ರೋಮ್ಯಾಕ್ಸ್ ಇನ್ 2ಬಿ ಸ್ಮಾರ್ಟ್‌ಫೋನ್ 6.52-ಇಂಚಿನ HD+ ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸಾಕ್ ಟಿ 610 ಆಕ್ಟಾ-ಕೋರ್ ಎಸ್ಒಸಿ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ನೈಟ್ ಮೋಡ್, ಹಿನ್ನೆಲೆ ಭಾವಚಿತ್ರ, ಸೌಂದರ್ಯ ಮೋಡ್, ಚಲನೆಯ ಫೋಟೋ, ಪ್ಲೇ ಮತ್ತು ವಿರಾಮ ವೀಡಿಯೊ ಶೂಟ್, ಮತ್ತು ಪೂರ್ಣ-ಎಚ್ ಡಿ ಫ್ರಂಟ್ ಮತ್ತು ಬ್ಯಾಕ್ ರೆಕಾರ್ಡಿಂಗ್ ಸೇರಿವೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. 5,000ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 160 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್, 20 ಗಂಟೆಗಳ ವೆಬ್ ಬ್ರೌಸಿಂಗ್, 15 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್ ಮತ್ತು 50 ಗಂಟೆಗಳ ಟಾಕ್ಟೈಮ್ ಅನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.