ಮಹಿಳಾ ಪಿಎಸ್ಐ ಮೇಲೆ ಅತ್ಯಾಚಾರ ಯತ್ನ: ಎಸ್ ಐ ಅಮಾನತು
Thursday, August 5, 2021
ತೆಲಂಗಾಣ: ತರಬೇತಿಯಲ್ಲಿ ಇದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಅತ್ಯಾಚಾರ ಯತ್ನ ಆರೋಪದಡಿ ಓರ್ವ ಸಬ್ ಇನ್ಸ್‌ಪೆಕ್ಟರ್ ಅನ್ನು ತೆಲಂಗಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಶ್ರೀನಿವಾಸರೆಡ್ಡಿ ಎಂಬ ಎಸ್ಐ ಅನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರೂ ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ೨೯ ವರ್ಷದ ಮಹಿಳೆ ಪ್ರೊಬೆಷನರಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ವಾರಂಗಲ್ ಪೊಲೀಸ್ ಕಮೀಷನರ್ ತರುಣ್ ಜೋಷಿಗೆ ಮಹಿಳೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಸೋಮವಾರ ರಾತ್ರಿ ಬೆಲ್ಲದ ಉಗ್ರಾಣದ ಮೇಲೆ ದಾಳಿ ನಡೆಸಬೇಕೆಂದು ಕಾರಣ ನೀಡಿ ತನ್ನ ಖಾಸಗಿ ವಾಹನದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಕರೆದೊಯ್ದಿದ್ದ ಶ್ರೀನಿವಾಸ ರೆಡ್ಡಿ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ.ಇದಕ್ಕೆ ಮಹಿಳಾ ಪಿಎಸ್ಐ ಈ ವೇಳೆ ತೀವ್ರ ಪ್ರತಿರೋಧ ತೋರಿದ ಕಾರಣದಿಂದಾಗಿ ಆರೋಪಿ ಮಹಿಳೆಯನ್ನು ಆಕೆಯ ನಿವಾಸದ ಬಳಿ ತಂದು ಬಿಟ್ಟಿದ್ದಾನೆ. ಸದ್ಯಕ್ಕೆ ಮಹಿಳೆಯ ದೂರನ್ನು ಆಧರಿಸಿ, ಆರೋಪಿ ಶ್ರೀನಿವಾಸರೆಡ್ಡಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.