ಬೆಳ್ಳಂಬೆಳಗೆ ಜಮೀರ್ ಅಹ್ಮದ್ ಗೆ ಶಾಕ್ ನೀಡಿದ ಐಟಿ- ಮನೆಯಲ್ಲಿ ಶೋಧ


ಬೆಂಗಳೂರು: ಮಾಜಿ ಸಚಿವ ,ಕಾಂಗ್ರೆಸ್  ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗೆ ದಾಳಿ ನಡೆಸಿದ್ದಾರೆ

ಚಾಮರಾಜಪೇಟೆ ಶಾಸಕರಾಗಿರುವ ಜಮೀರ್ ಅಹ್ಮದ್  ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ  ಮಾಡಿರುವ ಆರೋಪದಡಿ  ಐಟಿ ಅಧಿಕಾರಿಗಳ ದಾಳಿ ನಡೆದಿದೆ. 
ಬೆಂಗಳೂರಿನಲ್ಲಿರುವ ಜಮೀರ್ ಅಹ್ಮದ್  ನಿವಾಸ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮತ್ತು ಪ್ಲ್ಯಾಟ್ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಜಮೀರ್ ಅವರ ಬೆಂಗಳೂರಿನಲ್ಲಿ ಇರುವ  ಕಟೋಂನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯ ನೂತನ ಮನೆ , ಕಲಾಸಿಪಾಳ್ಯದಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಜಮೀರ್ ಅಹ್ಮದ್ ಮನೆಯಲ್ಲಿದ್ದರು . ಏಕಕಾಲದಲ್ಲಿ   50 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಶೋಧ ಕಾರ್ಯ ನಡೆಸುತ್ತಿದೆ.