ಚಿಕ್ಕಪೇಟೆಗೆ ಶಾಪಿಂಗ್ಗೆಂದು ಬಂದಿದ್ದ ಯುವತಿ, ಈ ರೀತಿ ರಾದ್ಧಾಂತ ನಡೆಸಿದ್ದಾಳೆ. ಪೊಲೀಸರು ಫುಟ್ಪಾತ್ ಮೇಲಿದ್ದ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದರು. ಇದಕ್ಕೆ ಮಹಿಳೆ ಯಾಕೆ ನೀವು ಜನರಿಗೆ ಕಷ್ಟ ಕೊಡುತ್ತೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾ ಳೆ. ನಂತರ ಪೊಲೀಸ್ ಮತ್ತೆ ಮಹಿಳೆಯ ನಡುವೆ ವಾಗ್ವಾದ ನಡೆದಿದೆ.
ಈ ಸಂದರ್ಭ ಮಹಿಳೆ ಪೋಲಿಸರು ಮಾಡುವ ಕೆಲಸವನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಮುಂದಾಗಿದ್ದಾಳೆ. ಪೊಲೀಸರು ಆಕೆಯ ಮೊಬೈಲನ್ನು ಕಿತ್ತುಕೊಂಡಿದ್ದು ಆಕೆ ನನ್ನ ಮೊಬೈಲ್ ಕೊಡಿ ಎಂದು ಹಟ ಹಿಡಿದಿದ್ದಾಳೆ. ಪೊಲೀಸರು ಕೊಡದಿದ್ದಾಗ ಅವರನ್ನು ಅಡ್ಡಗಟ್ಟಿದ ಯುವತಿ, ಕೊನೆಗೆ ಪೊಲೀಸ್ ಕೈಗೆ ಕಚ್ಚಿದ್ದಾಳೆ. ಬಳಿಕ ಆಕೆಯನ್ನು ಕೆ.ಆರ್.
ಮಾರುಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.